State

ಅಧ್ಯಕ್ಷರಾದವರೇ ಸಿಎಂ ಆಗ್ತಾರೆ ಅಂತ ನಿಯಮವಿಲ್ಲ; ಸಿದ್ದರಾಮಯ್ಯ ಅಧ್ಯಕ್ಷರಾಗದೇ ಸಿಎಂ ಆಗಿಲ್ವೇ? ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ನುಡಿ

Share

ರಾಜ್ಯ ರಾಜಕಾರಣದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ ಹಾಗೂ ಸಚಿವ ಸಂಪುಟ ಕಸರತ್ತಿನ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಮಹತ್ವದ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. 2028ರ ಸಿಎಂ ರೇಸ್ ಹಾಗೂ ಪಕ್ಷದ ಒನ್ ಮ್ಯಾನ್ ಒನ್ ಪೋಸ್ಟ್ ನಿಯಮದ ಕುರಿತು ಮಾತನಾಡಿರುವ ಅವರು, ಮುಖ್ಯಮಂತ್ರಿಯಾಗಲು ಪಕ್ಷದ ಅಧ್ಯಕ್ಷ ಸ್ಥಾನವೇ ಬೇಕಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಉದಾಹರಣೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು 2 ತಿಂಗಳಿನಿಂದ ಒಬ್ಬರಿಗೆ ಒಂದೇ ಹುದ್ಧೆ ಎಂದು ಹೇಳಲಾಗುತ್ತಿತ್ತು. ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾಗ ಬೇರೆ ವಿಚಾರಗಳಿದ್ದವು. ಸಚಿವರಾಗಲಿಲ್ಲವೆಂದರೇ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತಿತ್ತು. ಕೊನೆಯದಾಗಿ ಹೈಕಮಾಂಡ್’ಗೆ ಬಿಡಲಾಗಿತ್ತು. ಕೊನೆಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. 2028 ರ ಮುಖ್ಯಮಂತ್ರಿಯಾಗಬೇಕೆಂಬುದು ಆ ಸಂದರ್ಭದಲ್ಲಿ ಬರುವ ವಿಚಾರ. ಪಕ್ಷದ ಅಧ್ಯಕ್ಷರಾದರೇ ಮಾತ್ರ ಮುಖ್ಯಮಂತ್ರಿಗಳಾಗುತ್ತಾರೆಂದು ಇಲ್ಲ. ಸಿದ್ಧರಾಮಯ್ಯ ಅಧ್ಯಕ್ಷರಾಗದೆಯೇ ಮುಖ್ಯಮಂತ್ರಿಯಾಗಲಿಲ್ಲವೇ? ಎಂದು ಪ್ರಶ್ನಿಸಿದರು.

ಸಮಸ್ಯೆ ಬಂದಾಗ ಎಲ್ಲರೂ ರಿಪೇರಿ ಮಾಡಲೂ ಇಳಿಯಲೇ ಬೇಕು. ಡಿ.ಕೆ.ಶಿವಕುಮಾರ್ ಕೂಡ ಮಾಡಿದ್ದಾರೆ. ನಾವು ಅಧ್ಯಕ್ಷರಿದ್ದರೂ ಕೆಲಸ ಮಾಡ್ತೇವೆ ಇಲ್ಲದಿದ್ದರೂ ಕೆಲಸ ಮಾಡುತ್ತೇವೆ ಎಂದರು. ಇನ್ನು ಬಿ.ಕೆ.ಹರಿಪ್ರಸಾದ್ ಸಿಎಂ ರೇಸ್’ನಲ್ಲಿ ಸೇರಿಕೊಂಡರೇ ಎಂಬ ಪ್ರಶ್ನೆಗೆ ಅವರು ಕೂಡ ಹಳೆಯ ರಾಜಕಾರಣಿ. ಅದರಲ್ಲೇನಿದೆ ಎಂದರು. ಗೊಂದಲಗಳೆಲ್ಲ ನಿವಾರಣೆಯಾಗಿ ಮುಂಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಇನ್ನುಳಿದ ಸಚಿವ ಸ್ಥಾನಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ ಹೈಕಮಾಂಡ್ ಎಲ್ಲವನ್ನು ನಿಭಾಯಿಸಲಿದ್ದಾರೆ ಎಂದರು.

ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಹರಿಪ್ರಸಾದ್ ಅವರು ಬೆಂಗಳೂರಿನಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!