ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ವಿಶೇಷ ಜಾಗೃತಿ ಮೂಡಿಸಲು ‘ಗಿಡ ನೆಡಿ, ಗಿಡ ಬೆಳೆಸಿ’ ಎಂಬ ವಿನೂತನ ಸ್ಕೇಟಿಂಗ್ ರ್ಯಾಪಲಿಯನ್ನು ಆಯೋಜಿಸಲಾಗಿತ್ತು.

ಬೆಳಗಾವಿಯ ಗೋವಾ ವೇಸ್ ಈಜುಕೊಳದ ಆವರಣದಲ್ಲಿ ನಡೆದ ಈ ರ್ಯಾ ಲಿಯಲ್ಲಿ ಸ್ಕೇಟರ್ಸ್‌ಗಳು ಸ್ಕೇಟಿಂಗ್ ಮಾಡುತ್ತಾ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಗಿಡಗಳಿಂದ ನಮಗೆ ನೆರಳು, ಹಣ್ಣು-ಹಂಪಲುಗಳು ಹಾಗೂ ಹೇರಳವಾದ ಆಮ್ಲಜನಕ ದೊರೆಯಲಿದ್ದು, ಮಾನವನ ಉಳಿವಿಗಾಗಿ ಮರಗಳನ್ನು ಬೆಳೆಸುವುದು ಅತ್ಯಗತ್ಯ ಎಂದು ಪಾಲಿಕೆ ಸದಸ್ಯ ನಿತಿನ್ ಜಾಧವ್ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಸಿದ್ಧ ಚಿತ್ರಕಾರ ವಸಂತ್ ನಿರ್ಮಳೆ, ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂದಲಗೇಕರ್, ವಿಶಾಲ್ ವೇಸ್ನೆ, ಯೋಗೇಶ್ ಕುಲಕರ್ಣಿ, ಋಷಿಕೇಶ್ ಪಸಾರೆ, ಸೋಹಂ ಹಿಂದಲಗೇಕರ್, ಮಿಸಸ್ ಮಹತ್, ಸಮೀರ್ ಮಹತ್, ಕರುಣಾ ವಾಘೇಲಾ, ವಿಜಯ್ ನಾಯಕ್, ತುಳಸಿ ಹಿಂದಲಗೇಕರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ಈ ಮಹತ್ವದ ರ್ಯಾಕಲಿಯಲ್ಲಿ ಸ್ಕೇಟರ್ಸ್‌ಗಳಾದ ಪ್ರಾಣಿಕಾ ಮೋಟೇಕರ್, ಕುಲದೀಪ್ ಬಿರ್ಜೆ, ಪ್ರಾಂಜಲ್ ಪಾಟೀಲ್, ಸತ್ಯಂ ಪಾಟೀಲ್, ಜಾನ್ವಿ ತೆಂಡೂಲ್ಕರ್, ಆಶಿಶ್ ಅಂಗಡಿಕರ್, ಶ್ರೇಯಸ್ ಭಜಂತ್ರಿ, ಆದರ್ಶ್ ನಾಯಕ್, ರಚಿತ್ ನಾಂಗ್ರೆ, ರಾಜ್‌ವೀರ್ ಕದಂ, ಪ್ರೀತಮ್ ಬಾಗೇವಾಡಿ ಹಾಗೂ ಸಾರ್ಥಕ್ ಚವ್ಹಾಣ್ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು.
