BELAGAVI

ಶ್ರೀಶೈಲಕ್ಕೆ ೧೦ ಬಾರಿ ಕಾಲ್ನುಡುಗೆ ಕೈಗೊಂಡ ಪರಿಸರವಾದಿ ಸಿದವೀರ ತುಪ್ಪದಗೆ ಸನ್ಮಾನ

Share

ಪ್ರತಿಯೊಬ್ಬರೂ ವಾಹನಗಳನ್ನು ಅವಲಂಬಿಸಿ ಹೊಗೆಯುಗಳಿ ಪರಿಸರಕ್ಕೆ ಧಕ್ಕೆ ತರುವವರೆಲ್ಲರಿಗೂ ಸುಮಾರು ೧೦ಬಾರಿ ೮೨೦ ಕಿಮೀ ಅಂತರದ ಸುಕ್ಷೇತ್ರ ಶ್ರೀಶೈಲಕ್ಕೆ ಹೆಜ್ಜೆ ಹಾಕಿ ಯುವಕರಿಗೂ, ಸಮಾಜಕ್ಕೂ ಸ್ಪೂರ್ತಿ ತುಂಬಿದ ೬೫ ರ ಇಳಿ ವಯಸ್ಸಿನ ಪ್ರಗತಿಪರ ಕೃಷಿಕ ಸಿದವೀರ ತುಪ್ಪದ ಅವರ ಕಾಯಕ ನಿಜಕ್ಕೂ ಶ್ಲ್ಯಾಘನೀಯ ಎಂದು ಗ್ರಾಮದ ಗೋಕಾಕ ಮಾಜಿ ತಾಲೂಕ ಪಂಚಾಯತಿ ಅದ್ಯಕ್ಷ, ಧುರೀಣ ಶಿವಾಜಿರಾವ್ ಪಂಗನ್ನವರ ಹೇಳಿದರು.

ಅವರು ಸೋಮವಾರ ಅಕ್ಕತಂಗೇರಹಾಳ ದ ಕುಂದರನಾಡ ಸುದ್ದಿ ಕೇಂದ್ರ ದಲ್ಲಿ ಗ್ರಾಮದ ಪರ ಸಿದವೀರ ತುಪ್ಪದ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಪತಿಯೊಬ್ಬರೂ ಪರಿಸರ ಶುಚಿತ್ವಕ್ಕೆ ಒಂದೊಂದು ಗಿಡ ನೆಟ್ಟು ಪೋಷಿಸುವದಾಗಬೇಕು. ಪರಿಸರ ಮುಂದಿನ ನಮ್ಮ ಪೀಳಿಗೆಯ ಬಹು ದೊಡ್ಡ ಆಸ್ತಿ ಯಾಗಿದೆ ಎಂದರಲ್ಲದೆ, ಸಿದವೀರ ತುಪ್ಪದ ಪರಿಸರ ರಕ್ಷಿಸುವ ರಕ್ಷಕರಾಗಿದ್ದಾರೆ. ಅವರು ವಾಹನಗಳನ್ನು ಬಳಸದೆ ಸಮಾಜಕ್ಕೆ ಪರಿಸರ ರಕ್ಷಕರೆಂದು ಮಾದರಿಯಾಗಿದ್ದಾರೆ ಎಂದರು.

ಗ್ರಾಮದ ಕೃಷಿ ಕೇಂದ್ರದ ವ್ಯವಸ್ಥಾಪಕ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ರವಿ ಭಡಕಲ್
ಮಾತನಾಡಿ, ಸುಮಾರು ಗ್ರಾಮದಿಂದ ೮೨೦ಕಿಮೀ ದೂರದ ಶ್ರೀಶೈಲಕ್ಕೆ ೧೦ ಬಾರಿ ಹೆಜ್ಜೆ ಹಾಕುವದು ಸುಲಭದ ಮಾತಲ್ಲ. ಅಂಥಹ ವಿರಳ ಕಾರ್ಯ ಸಿದವೀರ ತುಪ್ಪದರು ಮಾಡಿ ಯುವಕರಿಗೆ ಸ್ಫೂರ್ತಿ ಯಾಗಿದ್ದಾರಲ್ಲದೆ,ಪಾದಯಾತ್ರೆಯಿಂದ. ರಕ್ತದೊತ್ತಡ ಮಧುಮೇಹ ಥೈರಾಯ್ಡ್ ಮುಂತಾದ ಕಾಯಿಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗುವದು ಎಂದರಲ್ಲದೆ, ನಮ್ಮ ದೈಹಿಕವಾಗಿಯೂ, ಸದ್ರಢವಾಗಿರಲು ಸಾಧ್ಯ. ಪಾದಯಾತ್ರೆಯಿಂದ . ಅವರು ನಾಡಿಗೆ ಹೊಸ ಕಳೆ ಯಾಗಿದ್ದಾರೆ. ಪರಿಸರಕ್ಕೆ ಮಾಲಿನ್ಯ ತಡೆಯಲು ಅಗತ್ಯಕ್ಕೆ ತಕ್ಕಂತೆ ಮಾತ್ರ ವಾಹನ ಬಳಸಬೇಕು. ಎಂದರು.

ಪಿಕೆಪಿಎಸ್ ಮಾಜಿ ಅದ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ ಮಾತನಾಡಿ, ಸಿದವೀರ ಅವರ ಅಜ್ಜ ಸಿದವೀರಪ್ಪಾ ಅವರೂ ಶ್ರೀಶೈಲಕ್ಜೆ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ಶ್ರೀಶೈಲದಲ್ಲೇ ತೀವ್ರ ಹೃದಯಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು ಅವರೂ ಅವರ ಪರಿಸರ ಪೂರಕ ಕಾಯಕದಿಂದಾಗಿ ಇಂದಿನ ಜನಾಂಗಕ್ಕೆ ಸ್ಫೂರ್ತಿ ಯಾಗಿದ್ದಾರೆ ಎಂದರು., ಈ ಸಂದರ್ಭದಲ್ಲಿ ಗ್ರಾಮದ ಧುರೀಣರಾದ ಅಶೋಕ ಕರಲಿಂಗನ್ನವರ, ನೀಲಪ್ಪಾ ಹಣಬರಟ್ಟಿ, ರಾಮಣ್ಣಾ ಮಾವನೂರ, ಅಡಿವೆಪ್ಪಾ ಉರಬಿನಹಟ್ಟಿ, ಗ್ರಹ ರಕ್ಷಕ ದಳದ ನಿವ್ರತ್ತ ಕಮಾಂಡರ್, ಬಸಪ್ಪಾ ತಿಳಗಂಜಿ, ಬಸಲಿಂಗಪ್ಪಾ ಪಾಟೀಲ, ಚಂದ್ರಪ್ಪಾ ಕೋಣಿ, ಕಾಡಪ್ಪಾ ಪಾಟೀಲ ಉಪಸ್ಥಿತರಿದ್ದರು.

Tags:

error: Content is protected !!