ಬೆಳಗಾವಿಯ ಹಿಂಡಾಲ್ಕೋ ಕಂಪನಿಯ ಉದ್ಯೋಗ ನೇಮಕಾತಿಯಲ್ಲಿ ತಮಗೂ ಸಮಾನ ಅವಕಾಶ ನೀಡಬೇಕೆಂದು ಆಗ್ರಹಿಸಿ ಗೌಂಡವಾಡ ಗ್ರಾಮಸ್ಥರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಕಂಪನಿಯಿಂದ ತೊಂದರೆಗೊಳಗಾದ ಗ್ರಾಮಗಳ ಪಟ್ಟಿಗೆ ತಮ್ಮನ್ನು ಸೇರಿಸಿಕೊಳ್ಳುವಂತೆ ಗ್ರಾಮದ ಯುವಕರು ಒತ್ತಾಯಿಸಿದ್ದಾರೆ.

ಬೆಳಗಾವಿಯ ಹಿಂಡಾಲ್ಕೋ ಕಂಪನಿಯ ಉದ್ಯೋಗ ನೇಮಕಾತಿಯಲ್ಲಿ ತಮಗೂ ಸಮಾನ ಅವಕಾಶ ನೀಡಬೇಕೆಂದು ಆಗ್ರಹಿಸಿ ಗೌಂಡವಾಡ ಗ್ರಾಮಸ್ಥರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಂಪನಿಯ ಆರಂಭದಿಂದಲೂ ಕೈಗಾರಿಕಾ ಚಟುವಟಿಕೆಗಳು, ಮಾಲಿನ್ಯ ಮತ್ತು ಪರಿಸರ ಹಾನಿಯಿಂದ ಗೌಂಡವಾಡ ಗ್ರಾಮವು ತೊಂದರೆಗೆ ಒಳಗಾಗಿದೆ, ಅಲ್ಲದೆ ಕಂಪನಿಯ ಅಭಿವೃದ್ಧಿಗಾಗಿ ಗ್ರಾಮದ ಜಮೀನನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಸುತ್ತಮುತ್ತಲಿನ ಯಮನಾಪುರ, ಕಾಕತಿ, ಮುತ್ಯಾನಟ್ಟಿ, ಕಣಬರಗಿ ಮತ್ತು ಬಸ್ಸನಕೊಳ್ಳ ಗ್ರಾಮಗಳಂತೆ ತಮಗೂ ಈ ಹಿಂದೆ ಸಮಾನ ಸೌಲಭ್ಯಗಳನ್ನು ನೀಡಲಾಗಿದ್ದರೂ, ಪ್ರಸ್ತುತ ಉದ್ಯೋಗಾವಕಾಶದ ಅರ್ಹ ಗ್ರಾಮಗಳ ಪಟ್ಟಿಯಿಂದ ಗೌಂಡವಾಡ ಗ್ರಾಮವನ್ನು ಕೈಬಿಡಲಾಗಿದೆ. ಆದ್ದರಿಂದ, ಮಾನ್ಯ ಶಾಸಕರು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಅರ್ಹ ಗ್ರಾಮಗಳ ಪಟ್ಟಿಗೆ ಗೌಂಡವಾಡ ಗ್ರಾಮವನ್ನು ಸೇರ್ಪಡೆಗೊಳಿಸಿ, ಇಲ್ಲಿನ ಅರ್ಹ ಯುವಕರಿಗೆ ಉದ್ಯೋಗದಲ್ಲಿ ಸಮಾನ ಮತ್ತು ನ್ಯಾಯಯುತ ಅವಕಾಶ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ದಿಲೀಪ್ ಚೌಗುಲೆ. ನಾರಾಯಣ್ ಪಿಂಗಟ್, ಭೈರು ಪವಾರ್, ಲಕ್ಷ್ಮಣ್ ಪಾಟಿಲ್, ಬಾಬು ದೊಡ್ಡಮನಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
