ಬೆಳಗಾವಿಯ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಇಂದು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇತ್ತೀಚೆಗೆ ನಡೆದ ಒಂದು ಪಾಡ್ಕಾಸ್ಟ್ ಕಾರ್ಯಕ್ರಮದ ವೇಳೆ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆ ಪ್ರವಾದಿ ಮುಹಮ್ಮದ್ (ಸ.ಅ) ಅವರ ಕುರಿತು ಅವಹೇಳನಕಾರಿ ಮತ್ತು ಅವಮಾನಕರ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಯಿಂದ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಸಂಬಂಧಿತ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆಕೆಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಶ್ರಫಿ ಫೌಂಡೇಶನ್ನ ಮುಈನ್ ದಫೇದಾರ್, ಉರ್ದು ಘರ್ ಸಮಿತಿಯ ಶರೀಫ್ ಅಹ್ಮದ್ ಶರೀಫ್ , ಗರೀಬ್ ನವಾಜ್ ಸಮಿತಿಯ ಸಯ್ಯದ್ ಸಾಂಬ್ರೇಕರ್, ಟಿಪ್ಪು ಸೇನೆಯ ನವೀದ್ ಜಮಾದಾರ್, ಖತೀಬ್-ಎ-ಆಝಂ ಫೌಂಡೇಶನ್ನ ಶಬೀರ್ ದೇಸಾಯಿ ಅವರೊಂದಿಗೆ ಅಬ್ದುಲ್ ಕಾಜಿ, ಮುಜಾಹಿದ್ ದೇಶನೂರು, ಗುಲ್ಜಾರ್ ಮಿನ್ಯಾರ್, ಇಕ್ಬಾಲ್ ಅಹ್ಮದ್ ಜಕಾತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
