Belagavi

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಕರವೇ ಆಕ್ರೋಶ: ಸಂಘಟನೆ ನಿಷೇಧಕ್ಕೆ ಗೃಹ ಸಚಿವರಿಗೆ ಪತ್ರ

Share

ಬೆಳಗಾವಿಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿರುವ ಪುಂಡ ಎಂಇಎಸ್ ಬೆರಳಣಿಕೆಯ ನಾಯಕರು ಸ್ಥಳೀಯ ಚುನಾವಣೆಯ ಸಮೀಪದಲ್ಲಿರುವುದರಿಂದ ಮಹಾರಾಷ್ಟ್ರದ ಅನುದಾನಕ್ಕೆ ಪುಂಡಾಟ ನಡೆಸಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ರಾಜ್ಯ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಹೇಳಿದರು.

ಭಾನುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ಪದೇ ಪದೇ ನಾಡದ್ರೋಹಿ ಚಟುವಟಿಕೆ ನಡೆಸುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸುವ ದೈರ್ಯ ಯಾವ ಪಕ್ಷದ ನಾಯಕರು ಮಾಡದೆ ಇರುವುದು ದುರ್ದೈವದ ಸಂಗತಿ ಎಂದರು.
ಕನ್ನಡ ಕಡ್ಡಾಯವನ್ನು ವಿರೋಧಿಸಿ ನಡೆಸುವ ಎಂಇಎಸ್ ರ್ಯಾಲಿಗೆ ಅನುಮತಿ ಕೊಡುವುದಿಲ್ಲ ಎಂದು ಹೇಳುವ ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಇಲಾಖೆ ಪ್ರತಿ ಬಾರಿ ರಾತ್ರೋರಾತ್ರಿ ಅನುಮತಿ ನೀಡಿ ಕನ್ನಡಿಗರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

ಎಂಇಎಸ್ ಪುಂಡಾಟಿಕೆಯನ್ನು ಸಹಿಸುವುದಿಲ್ಲ. ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಇಎಸ್ ಪುಂಡರಿಗೆ ಮನವಿ ಕೊಡಲು ಅವಕಾಶ ಕೊಡದೆ
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಗವನ್ನವರ ಮಾತನಾಡಿ, ಕನ್ನಡ ಕಡ್ಡಾಯಗೊಳಿಸಿರುವುದನ್ನು ಧಿಕ್ಕರಿಸಿ ಎಂಇಎಸ್ ನಡೆಸಿರುವ ಮಹಾ ರ್ಯಾಲಿಯ ಪರ್ಯಾಯವಾಗಿ ಕರವೇ ನಾರಾಯಣಗೌಡ ಬಣ ಸ್ವಾಭಿಮಾನ ರ್ಯಾಲಿಯನ್ನು ಜೂ.22ಕ್ಕೆ ಆಯೋಜಿಸಲಾಗಿದೆ ಎಂದರು‌.
ಎಂಇಎಸ್ ಪುಂಡ ಶುಭಂ ಸೇಳಕೆ ಮರಾಠಿಗರು ಕನ್ನಡಿಗರ ಜೊತೆಗೆ ವ್ಯವಹಾರ ಮಾಡಬೇಡಿ ಎಂದು ಪುಂಡಾಟದ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಪೊಲೀಸ್ ಇಲಾಖೆ ಆತನ ಮೇಲೆ ಗುಂಡಾ ಕಾಯ್ದೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Tags:

error: Content is protected !!