ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಗಾಂಜಾ ಸೇವನೆ ಮಾಡುತ್ತಾ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಐದು ಜನ ಆರೋಪಿಗಳನ್ನು ಬೆಳಗಾವಿಯ ಮಾರ್ಕೆಟ್ ಮತ್ತು ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಇವರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಪೊಲೀಸರು ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಗಾಂಜಾ ಕುಡುಕರ ವಿರುದ್ಧ ಮಾರ್ಕೆಟ್ ಹಾಗೂ ಮಾಳಮಾರುತಿ ಠಾಣೆಯ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ದಿನಾಂಕ 04/05/2026 ರಂದು ಸೆಂಟ್ರಲ್ ಬಸ್ ಸ್ಟ್ಯಾಂಡ್ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಮಹಾದ್ವಾರ ರಸ್ತೆಯ ನಿವಾಸಿ ವೈಭವ ಪ್ರಕಾಶ ಕುರಣಿ (23) ಎಂಬಾತನನ್ನು ಮಾರ್ಕೆಟ್ ಠಾಣೆಯ ಎಎಸ್‌ಐ ಶಂಕರ ಎಂ. ಶಿಂಧೆ ಮತ್ತು ಸಿಬ್ಬಂದಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ದಿನಾಂಕ 04/06/2026 ರಂದು ಮಹಾಂತೇಶ ನಗರದ ಶಿವಾಲಯದ ಬಳಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ವೀರಭದ್ರ ನಗರದ ತೋಫಿಕ್ ಇಸ್ಮಾಯಿಲ್ ಮುಲ್ಲಾ (23), ಅಶೋಕ ನಗರದ ಮುಜಾಹಿದ್ ಅಬ್ದುಲಲತೀಫ ತಾಳಕೋಟಿ (31) ಹಾಗೂ ಮಹಾಂತೇಶ ನಗರದ ಯಶ್ ಶಂಕರ ಸುಧಾಕರ (28) ಎಂಬುವವರನ್ನು ಮಾಳಮಾರುತಿ ಠಾಣೆಯ ಪಿಎಸ್‌ಐ ಉದಯ್ ಪಾಟೀಲ್ ಹಾಗೂ ಸಿಬ್ಬಂದಿ ಬಂಧಿಸಿ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ. ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ನಶೆಕೋರರನ್ನು ಸದೆಬಡಿದ ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಯವರ ಈ ಸಮಯೋಚಿತ ಕಾರ್ಯವನ್ನು ಬೆಳಗಾವಿ ನಗರದ ಮಾನ್ಯ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ರವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ

