BELAGAVI

ರಸಗೊಬ್ಬರಕ್ಕೆ ಎಫ್.ಐ.ಡಿ ಕಡ್ಡಾಯ ರದ್ದತಿಗೆ ಆಗ್ರಹ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕಬ್ಬು ಬೆಳೆಗಾರರ ಸಂಘದಿಂದ ಮನವಿ

Share

ಬೆಳಗಾವಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬರ ಶಾಂತಕುಮಾರ್ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸುವುದು ಸೇರಿದಂತೆ ರೈತರ ಜ್ವಲಂತ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಆಗ್ರಹಪಡಿಸಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘ ಕುರುಬರ ಶಾಂತಕುಮಾರ್ ಬಣದ ಕಾರ್ಯಕರ್ತರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ರಸಗೊಬ್ಬರ ವಿತರಿಸಲು ಎಫ್.ಐ.ಡಿ ಕಡ್ಡಾಯಗೊಳಿಸಿದ್ದು, ಇದು ರೈತರನ್ನು ಗೊಬ್ಬರದಿಂದ ವಂಚಿತಗೊಳಿಸುತ್ತಿದೆ. ಇದನ್ನು ಕೂಡಲೇ ರದ್ಧುಗೊಳಿಸಬೇಕು. ಅಲ್ಲದೇ ಕೃಷಿ ಪಂಪ್’ಸೆಟ್’ಗಳನ್ನು ಖಾಸಗೀಕರಣಗೊಳಿಸುತ್ತಿರುವುದು ರೈತರು ಮತ್ತು ಅಧಿಕಾರಿಗಳಿಗೆ ಸಮಸ್ಯೆಯಾಗಲಿದೆ. ಇದಕ್ಕೆ ರೈತರ ತೀವ್ರ ವಿರೋಧವಿದೆ. ಕಬ್ಬಿಗೆ ಎಫ್.ಆರ್.ಪಿ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿದ್ದು, ಪುರ್ನಪರಿಶೀಲಿಸಿ ಕೇಂದ್ರ ಸರ್ಕರವು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಡಿಸೇಲ್ ದರವನ್ನು ರೈತರಿಗೆ ವಿಶೇಷ ದರದಲ್ಲಿ ವಿತರಿಸಬೇಕು. 2025-26ನೇ ಸಾಲಿನ ಕಬ್ಬಿನ ಬಾಕಿ 1500 ಕೋಟಿಯನ್ನು ಕೂಡಲೇ ಮಂಜೂರು ಮಾಡಬೇಕು. ರಾಮದುರ್ಗ ಮತ್ತು ಬದಾಮಿ ತಾಲೂಕಿನ ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಕಾಮಗಾರಿಯನ್ನು ಪುನರಾರಂಭಿಸಬೇಕು. ಅಲ್ಲದೇ ಈ ಯೋಜನೆಗಳಿಗೆ ಭೂಸ್ವಾಧೀನಗೊಂಡ ರೈತರಿಗೆ ಕೂಡಲೇ ಪರಿಹಾರವನ್ನು ವಿತರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಕುರುಬರ ಶಾಂತಕುಮಾರ್ ಬಣದ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!