BELAGAVI

ಬೆಳಗಾವಿ: ಎಟೂಕೆ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೆ ಆರ್ ಶೆಟ್ಟಿ ಲಾಯಾಜ್ ತಂಡಕ್ಕೆ ಅದ್ಭುತ ಜಯ, ಚಾಂಪಿಯನ್ ಪಟ್ಟ!

Share

ಬೆಳಗಾವಿಯ ಫಿನಿಕ್ಸ್ ಶಾಲೆ ಆಯೋಜಿಸಿದ್ದ ಪ್ರತಿಷ್ಠಿತ ‘ಎಟೂಕೆ ಚಷಕ’ ಆಮಂತ್ರಿತರ ಅಂತರ್ ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಭರ್ಜರಿಯಾಗಿ ಮುಕ್ತಾಯಗೊಂಡಿದೆ. ರೋಮಾಂಚನಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ಕೆ ಆರ್ ಶೆಟ್ಟಿ ಲಾಯಾಜ್ ತಂಡವು ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಬೆಳಗಾವಿಯ ಫಿನಿಕ್ಸ್ ಮೈದಾನದಲ್ಲಿ ನಡೆದ ಈ ರೋಚಕ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ ಕೆ ಇ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆ ಆರ್ ಶೆಟ್ಟಿ ಲಾಯಾಜ್ ತಂಡವು 14.4 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಜಯಭೇರಿ ಬಾರಿಸಿತು. ವಿಜೇತ ತಂಡದ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸಂಗ್ರಾಮ್ ಪಾಟೀಲ್ (33 ರನ್) ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಪಂದ್ಯದ ಮುಕ್ತಾಯದ ನಂತರ ಮುಖ್ಯ ಅತಿಥಿಗಳಾದ ಅನ್ಸಾರ್ ಹುಬ್ಬಳ್ಳಿವಾಲೆ, ಶಿವಾಜಿ ಪಾಟೀಲ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ವಿಜೇತ ಮತ್ತು ರನ್ನರ್ ಅಪ್ ತಂಡಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

Tags:

error: Content is protected !!