BELAGAVI

ಬೆಳಗಾವಿ: ಜೂನ್ 12ರಂದು ಶಹಾಪುರದ ಶ್ರೀ ಮಹಾಲಕ್ಷ್ಮೀದೇವಿಯ 114ನೇ ವರ್ಷದ ಜನ್ಮದಿನೋತ್ಸವ; ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

Share

: ಬೆಳಗಾವಿಯ ಶಹಾಪುರದ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮೀದೇವಿ ಸನ್ನಿಧಿಯಲ್ಲಿ ಜೂನ್ 12ರ ಶುಕ್ರವಾರದಂದು 114ನೇ ವರ್ಷದ ಜನ್ಮದಿನೋತ್ಸವ ಹಾಗೂ ವರ್ಧಂತಿ ಉತ್ಸವವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ ಶಹಾಪುರದ ಲಕ್ಷ್ಮಿ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀದೇವಿ ಕ್ಷೇತ್ರದಲ್ಲಿ 114 ವರ್ಷಗಳ ಹಿಂದೆ ನಡೆದಿದ್ದ ಐತಿಹಾಸಿಕ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನೆನಪಿನಲ್ಲಿ, ಬರುವ ಜೂನ್ 12ರ ಶುಕ್ರವಾರದಂದು ದೇವಿಯ 114ನೇ ವರ್ಷದ ಜನ್ಮದಿನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೂಜಾರಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ಧಾರ್ಮಿಕ ಮಹೋತ್ಸವದ ನಿಮಿತ್ತ ಶುಕ್ರವಾರ ಮುಂಜಾನೆ 8:00 ಗಂಟೆಗೆ ಶ್ರೀ ಲಕ್ಷ್ಮೀದೇವಿಯ ಪಾದಕಮಲಗಳಿಗೆ ವಿಶೇಷ ಅಭಿಷೇಕ ನೆರವೇರಲಿದ್ದು, ಬಳಿಕ ಭವ್ಯ ಕುಂಭ ಮೆರವಣಿಗೆ ಜರುಗಲಿದೆ. ಮಧ್ಯಾಹ್ನ 12:00 ಗಂಟೆಗೆ ಶಹಾಪುರದ ಬಸವಾಣ ಗಲ್ಲಿಯಲ್ಲಿರುವ ಲಕ್ಷ್ಮೀದೇವಿ ಮಂದಿರದಲ್ಲಿ ದೇವಿಗೆ ಸಾಂಪ್ರದಾಯಿಕ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಆಯೋಜಿಸಲಾಗಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಶಹಾಪುರ ಹಾಗೂ ಸುತ್ತಮುತ್ತಲಿನ ಸಮಸ್ತ ಸಾರ್ವಜನಿಕರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಪೂಜಾರಿ ಕುಟುಂಬದವರು ಆದರದ ಆಹ್ವಾನ ನೀಡಿದ್ದಾರೆ.

Tags:

error: Content is protected !!