1. ವಿಜಯಪುರದಲ್ಲಿ ಆಹಾರ ಇಲಾಖೆ ಭರ್ಜರಿ ದಾಳಿ
2. ಅಕ್ರಮ ಸಿಲಿಂಡರ್ ಬಳಸುವವರಿಗೆ ಅಧಿಕಾರಿಗಳ ಬಿಸಿ
3. ಗೃಹಬಳಕೆ ಸಿಲಿಂಡರ್ ವಾಣಿಜ್ಯ ಬಳಕೆಗೆ ಬ್ರೇಕ್
4. ನಿಯಮ ಉಲ್ಲಂಘಿಸಿದ ಹೋಟೆಲ್ ಮಾಲೀಕರಿಗೆ ಎಚ್ಚರಿಕೆ

ಆ್ಯಂಕರ್: ವಿಜಯಪುರ ನಗರದಲ್ಲಿ ಗೃಹಬಳಕೆ ಸಿಲಿಂಡರ್ಗಳ ಅಕ್ರಮ ವಾಣಿಜ್ಯ ಬಳಕೆಗೆ ಆಹಾರ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇಂದು ಏಕಾಏಕಿ ಖಚಿತ ಮಾಹಿತಿ ಮೇರೆಗೆ ನಗರದ ವಿವಿಧ ಹೋಟೆಲ್ಗಳು ಹಾಗೂ ಬೀದಿ ಬದಿ ಆಹಾರ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಕ್ರಮವಾಗಿ ಬಳಸಲಾಗುತ್ತಿದ್ದ ಗೃಹ ಬಳಕೆಯ ಸಿಲಿಂಡರ್ಗಳನ್ನು ವಶಪಡಿಸಿಕೊಂಡರು.
ದಾಳಿಯ ವೇಳೆ ನಿಯಮ ಉಲ್ಲಂಘನೆ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸೂಚಿಸಿದರು.
ಇತ್ತೀಚಿನ ಅವಧಿಯಲ್ಲಿ ಗ್ಯಾಸ್ ಸರಬರಾಜಿನ ಮೇಲೆ ಉಂಟಾಗಿರುವ ಸ್ವಲ್ಪ ಯುದ್ಧದ ಪರಿಣಾಮ ಹಾಗೂ ಪೂರೈಕೆ ವ್ಯತ್ಯಯದ ಹಿನ್ನಲೆಯಲ್ಲಿ ಗೃಹಬಳಕೆ ಸಿಲಿಂಡರ್ ದುರುಪಯೋಗ ತಡೆಗಟ್ಟಲು ಇಲಾಖೆ ಹೆಚ್ಚಿನ ನಿಗಾವಹಿಸಿದೆ. ಸಾರ್ವಜನಿಕರಿಗೆ ಮೀಸಲಾದ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದರಿಂದ ಸಾಮಾನ್ಯ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಇಂತಹ ಅಕ್ರಮಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಪ್ಲೋ..
