• ಬಾರ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ
• ವಕೀಲರ ಧ್ವನಿಯಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟ ತಂಡ
• ಬಿ.ಜೆ. ಗಂಗಾಯಿ ನೇತೃತ್ವದ ನೂತನ ಸಮಿತಿಗೆ ಸತ್ಕಾರ
• ಚುನಾವಣಾ ತಂಡದ ಶ್ರಮಕ್ಕೆ ಪದಾಧಿಕಾರಿಗಳ ಶ್ಲಾಘನೆ

ಬೆಳಗಾವಿ ಬಾರ್ ಅಸೋಸಿಯೇಷನ್ನ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿ.ಜೆ. ಗಂಗಾಯಿ ಅವರು ಸಂಘದ ಉನ್ನತಿಗಾಗಿ ಹೊಸ ಯೋಜನೆಗಳ ಭರವಸೆ ನೀಡಿದ್ದಾರೆ.
ಬೆಳಗಾವಿ ಬಾರ್ ಅಸೋಸಿಯೇಷನ್’ನ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಮತ್ತು ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರಾದ ಬಿ.ಜೆ. ಗಂಗಾಯಿ ಮಹಿಳಾ ಅಧ್ಯಕ್ಷೆ ಜಯಶ್ರಿ ಮಂಡ್ರೋಳಿ, ಪ್ರಧಾನ ಕಾರ್ಯದರ್ಶಿ ಸಚೀನ್ ಶಿವಣ್ಣವರ, ಜಂಟಿ ಕಾರ್ಯದರ್ಶಿ ಪ್ರಶಾಂತ್ ಪಾಟೀಲ್ ಹಾಗೂ ಖಜಾಂಚಿ ನಿರ್ಮಲಾ ಪಾಟೀಲ್, ಮ್ಯಾನೇಜ್ಮೆಂಟ್ ಕಮಿಟಿ ಸದಸ್ಯರಾದ ಅಭಿಷೇಕ್ ತಾರಿಹಾಳಕರ, ವಸಂತ ಅಕ್ಕೆನ್ನವರ, ಹೊಳಿ ಮಲ್ಲಪ್ಪ ಮಾನಿಂಗಪ್ಪ ಹಾಗೂ ಜಿ.ಎ. ಹಿರೇಮಠ, ಮ್ಯಾನೇಜ್ಮೆಂಟ್ ಕಮಿಟಿಯ ಮಹಿಳಾ ಸದಸ್ಯರಾದ ದೀಪಾ ಮರಡಿ ಹಾಲನ್ನವರ ಜ್ಯೋತಿ ಪಟ್ಟಣಶೆಟ್ಟಿ ಹಾಗೂ ರಾಜೇಶ್ವರಿ ಪಾಟೀಲ್, ರಿಟರ್ನಿಂಗ್ ಆಫೀಸರ್ ಜೆ.ಡಿ. ತಿಗಡಿ ಹಾಗೂ ಆರ್.ಎನ್. ಮಿಸಾಳೆ ಅವರನ್ನು ಸತ್ಕರಿಸಲಾಯಿತು. ಇದೇ ವೇಳೆ ಚುನಾಯಿತ ಸದಸ್ಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ನೂತನ ಅಧ್ಯಕ್ಷ ಬಿ.ಜೆ. ಗಂಗಾಯಿ ಅವರು ರಿಟರ್ನಿಂಗ್ ಆಫೀಸರ್ ಜೆ.ಡಿ. ತಿಗಡಿ ಅವರ ನೇತೃತ್ವದ ತಂಡದವರು 10-15 ದಿನ ಕೆಲಸವನ್ನು ಕೇವಲ 2 ದಿನದಲ್ಲಿ ಮಾಡಿದ್ದಾರೆ. ಹಗಲು ರಾತ್ರಿ ಶ್ರಮಪಟ್ಟು ಬಾರ್ ಅಸೋಸಿಯೇಷನ್ ಚುನಾವಣೆಯನ್ನು ಸುಗಮವಾಗಿ ಯಶಸ್ವಿಗೊಳಿಸಿದ್ದಾರೆ. ಪ್ರತಿವರ್ಷ ಬೆಳಗಾವಿಯಿಂದ ಸುಮಾರು 25 ಸದಸ್ಯರು ರಾಜ್ಯಮಟ್ಟದ ಜ್ಯೂಡಿಷಿಯಲ್ ಅಕಾಡೆಮಿಗೆ ಕಳುಹಿಸಿ ಕೊಡುತ್ತೇವೆ ಎಂಬ ಪ್ರತಿಪಾದನೆಯನ್ನು ಮಾಡಿದರು. ಅಲ್ಲದೇ ಬೆಳಗಾವಿಯ ಸಂಘದ ಎಲ್ಲ ಸದಸ್ಯರ ಕುಂದು ಕೊರತೆಗಳ ಧ್ವನಿಯಾಗಿ ಕೆಲಸ ನಿರ್ವಹಿಸುತ್ತೇವೆ ಎಂದರು.
ಇನ್ನು ರಿಟರ್ನಿಂಗ್ ಆಫೀಸರ್ ಜೆ.ಡಿ. ತಿಗಡಿ ಅವರು ಕೂಡ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಇನ್ನೋರ್ವ ಗಣ್ಯರು ಮಾತನಾಡಿ ಆಯ್ಕೆಗೊಂಡ ಎಲ್ಲ ಸದಸ್ಯರು ವಕೀಲರ ಧ್ವನಿಯಾಗಿ ಕಾರ್ಯನಿರ್ವಹಿಸುವ ಅಪೇಕ್ಷೆಯಿದೆ. ನೂತನ ಅಧ್ಯಕ್ಷ ಗಂಗಾಯಿ ಅವರು ಹಿರಿಯರಾಗಿದ್ದು, ಬೆಳಗಾವಿ ಬಾರ್ ಅಸೋಸಿಯೇಷನ್ ಪ್ರತಿಷ್ಠೆಯನ್ನು ಮುಂದುವರೆಸಿಕೊಂಡು ಅದರ ಉನ್ನತಿಗೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಬೆಳಗಾವಿ ಬಾರ್ ಅಸೋಸಿಯೇಷನ್’ನ ನೂತನ ಸದಸ್ಯರು ಮತ್ತು ಇನ್ನಿತರರು ಉಪಸ್ಥಿತರಿದ್ಧರು.
