BELAGAVI

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಬೇಸಿಗೆ ಶಿಬಿರ: ಮಕ್ಕಳಿಂದ ಅಭೂತಪೂರ್ವ ಪ್ರತಿಕ್ರಿಯೆ

Share

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಮೇ 10 ರಂದು ಬೆಳಗಾವಿಯ ಅನಗೋಳ, ಬಾಬಲೆ ಗಲ್ಲಿಯಲ್ಲಿ ಆಯೋಜಿಸಿದ್ದ ಒಂದು ದಿನದ ಬೇಸಿಗೆ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು.

ಈ ಶಿಬಿರದಲ್ಲಿ ಬೆಳಗಾವಿಯ ಚನ್ನಮ್ಮನಗರ, ಅನಗೋಳ, ಭಾಗ್ಯನಗರ ಗಣೇಶಪುರ, ಸಾಮ್ರಾ, ಶಹಾಪುರ, ಶಾಸ್ತ್ರಿನಗರ, ತಿಲಕವಾಡಿ, ವಡಗಾಂವ, ಪೀರಣವಾಡಿ ಮತ್ತು ಯಮಕನಮರ್ಡಿ ಮುಂತಾದ ವಿವಿಧ ಸ್ಥಳಗಳಿಂದ ಒಟ್ಟು 76 ಬಾಲಕ , ಬಾಲಕಿಯರು ಭಾಗವಹಿಸಿದ್ದರು. ಬಾಲಕ , ಬಾಲಕಿಯರಿಗಾಗಿ ವಿವಿಧ ರೀತಿಯ ಆಟಗಳನ್ನು ಆಯೋಜಿಸಲಾಗಿತ್ತು. ಆಟಗಳ ಜೊತೆಗೆ, ಜೀವನದ ಮೌಲ್ಯಗಳ ಬಗ್ಗೆ ಮಾಹಿತಿಯನ್ನು ಸಹ ನೀಡಲಾಯಿತು. ಬಾಲಕ ಬಾಲಕಿಯರು ವಿವಿಧ ಕಲೆಗಳ ಅದ್ಭುತ ಪ್ರದರ್ಶನ ನೀಡಿದರು. ರುಚಿಕರವಾದ ಸಾತ್ವಿಕ ಊಟವನ್ನು ಕೊಡ ಲಾಯಿತು. ಇದರೊಂದಿಗೆ ‘ತಾಯಂದಿರ ದಿನ’ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಬಾಲಕ ಬಾಲಕಿಯರ ಪೋಷಕರನ್ನು ಕರೆಸಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂದೇಶವನ್ನು ನೀಡಲಾಯಿತು.

ಆದರಣಿಯ ವಿದ್ಯಾ ಬೆಹನ್ ಜಿ ಅವರ ಮಾರ್ಗದರ್ಶನದಲ್ಲಿ ಇದೆಲ್ಲವನ್ನೂ ಆಯೋಜಿಸಲಾಯಿತು. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವಿವಿಧ ಕೇಂದ್ರಗಳಿಂದ ಅಕ್ಕಂದಿರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು
ಬಿಕೆ ಮಹೇಶ್ ನಾಯಕ್, ಬಿಕೆ ಮನೋಹರ್,
ಬಿಕೆ ಶೋಭಾ ನಾಯಕ ಮತ್ತು ಬಿಕೆ ಭಾರತಿ ಅವರ ಸಕ್ರಿಯ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮದ ಸೌಂದರ್ಯವನ್ನು ಹೆಚ್ಚಿಸಿತು.

Tags:

error: Content is protected !!