ಬೆಳಗಾವಿ : ಸಂಜೀವಿನಿ ಫೌಂಡೇಶನ್‌ನ ಕಾಳಜಿ ಕೇಂದ್ರದಲ್ಲಿ ವಿಶ್ವ ಮಾತೃ ದಿನವನ್ನು ಸಂಭ್ರಮ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗುಂಪು ನೃತ್ಯ ಹಾಗೂ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೈಂಟ್ಸ್ ಸಖಿಯ ಅಧ್ಯಕ್ಷೆ ಸುಲಕ್ಷಣಾ ಶಿನೋಳಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರನ್ನು ಚೇರಮನ್ ಮದನ ಬಾಮಣೆ ಹಾಗೂ ಸಂಸ್ಥಾಪಕಿ ಡಾ. ಸವಿತಾ ದೇಗಿನಾಳ ಅವರಿಂದ ಶಾಲು, ಸ್ಮರಣಿಕೆ ಮತ್ತು ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.
ಡಾ. ಸವಿತಾ ದೇಗಿನಾಳ ಅವರು ಮಾತೃ ದಿನದ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸುಲಕ್ಷಣಾ ಶಿನೋಳಕರ್ ಅವರೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ಸಂಜೀವಿನಿ ಫೌಂಡೇಶನ್‌ನ ಕಾರ್ಯವನ್ನು ಶ್ಲಾಘಿಸಿದರು.


ಕಾರ್ಯಕ್ರಮವನ್ನು ಅರ್ಚನಾ ಶಿರಹಟ್ಟಿ ನಿರೂಪಿಸಿದರು. ರಾಧಿಕಾ ಕಲಾದಗಿ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸರಿತಾ ಸಿದ್ದಿ, ಸಾವಿತ್ರಿ ಮಾಳಿ, ಸುನೀಲ್ ಚನ್ನದಾಸರ, ಅಕ್ಷತಾ ಅಕ್ಕೋಳೆ, ಕಾವೇರಿ ಲಮಾಣಿ ಹಾಗೂ ಅಂಕಿತಾ ರಾಜೋರೆ ವಿಶೇಷ ಪರಿಶ್ರಮ ವಹಿಸಿದರು.

