ATTACK

ಹಿಂಡಲಗಾ ಜೈಲಿನಲ್ಲಿ ‘ಮೊಬೈಲ್’ ಮಾಯಾಜಾಲ: ಬೆಳಗಾವಿ ಪೊಲೀಸರಿಂದ ಖತರ್ನಾಕ್ ಆಪರೇಷನ್!

Share

ಹಿಂಡಲಗಾ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳು ಬೆಳಗಾವಿ ಪೊಲೀಸರ ನಿದ್ದೆಗೆಡಿಸಿವೆ. ಜೈಲಿನಲ್ಲಿನ ಮೊಬೈಲ್ ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಶುಕ್ರವಾರ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದಲ್ಲಿ ಜೈಲಿನೊಳಗೆ 12 ಮೊಬೈಲ್ ಬಳಕೆ ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಜೈಲಿನೊಳಗಿನ ಕಳ್ಳಾಟ ಪತ್ತೆಗಾಗಿ ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಮೇಲ್ವಿಚಾರಣೆಯನ್ನು ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ವಹಿಸಿಕೊಂಡಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆಯಲ್ಲಿ ನಠೋರಿಯಸ್ ಆರೋಪಿ ಜಯೇಶ್ ಪೂಜಾರಿ ಹೆಸರು ಬೆಳಕಿಗೆ ಬಂದಿದ್ದು, ಆತ ಒಬ್ಬನೇ 28 ಮೊಬೈಲ್ ಬಳಸಿರುವುದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಶಂಕೆಯೂ ವ್ಯಕ್ತವಾಗಿದೆ.

ಹಿಂಡಲಗಾ ಜೈಲಿನಲ್ಲೇ ಕುಳಿತುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದ ಹಿನ್ನೆಲೆ ಈ ಬೆಳವಣಿಗೆಗೆ ಮತ್ತಷ್ಟು ಗಂಭೀರತೆ ಬಂದಿದೆ.ಎನ್‌ಐಎ ನೀಡಿದ ಮಾಹಿತಿಯ ಆಧಾರದ ಮೇಲೆ ಜೈಲು ಅಧಿಕಾರಿಗಳು ದೂರು ದಾಖಲಿಸಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬೈಟ್

Tags:

error: Content is protected !!