ದೇಶದಾದ್ಯಂತ ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.


ದೇಶದಾದ್ಯಂತ ಬಕ್ರೀದ್ ಹಬ್ಬದ ನಿಮಿತ್ಯ ಕುರಬಾನಿ ಹೆಸರಲ್ಲಿ ಗೋವುಗಳ ವಧೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮುಪ್ಪಿನ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಜೀಗಳು ಮಾತನಾಡಿ, ಕರ್ನಾಟಕದಲ್ಲಿ ಬಕ್ರೀದ್ ನಿಮಿತ್ಯ ನಡೆಯುವ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯುವ ಕೆಲಸವಾಗಬೇಕು. ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. ಗೋವುಗಳಿಗೆ ಮೇವಿನ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಗೋವುಗಳ ರಕ್ಷಣೆಗೆ ಆದ್ಯತೆಯನ್ನು ಕೊಡಬೇಕೆಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಸರ್ಕಾರದ ಆದೇಶಗಳಿದ್ದರೂ ಕೂಡ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ತಕ್ಷಣವೇ ಬ್ರೇಕ್ ಹಾಕಬೇಕು. ಹಿಂದು ಸಂಪ್ರದಾಯದಲ್ಲಿ ಗೋವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತಿದ್ದು, ಗೋಹತ್ಯೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಮುಂಬರುವ ಮೇ 29 ರವರೆಗೆ ಜಾನುವಾರು ಸಂತೆ ಹಾಗೂ ಗೋ ಮಾರಾಟವನ್ನು ನಿಷೇಧಿಸಬೇಕು ಮತ್ತು ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪರಿಶೀಲನಾ ತಂಡಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಕೃಷ್ಣಾ ಭಟ್ ಅವರು ದೇಶದಾದ್ಯಂತ ಬಕ್ರೀದ್ ಹಬ್ಬದ ನಿಮಿತ್ಯ ಕುರಬಾನಿ ಹೆಸರಲ್ಲಿ ಗೋವುಗಳ ವಧೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಲಾಗುತ್ತಿದೆ. ಭಾರತ ಗೋ ಆಧಾರಿತ ಕೃಷಿ ದೇಶ. ಪ್ರತಿ ಮುಂಜಾನೆ ಎದ್ದು ಚಹಾ ಸೇವಿಸಲು ಕೂಡ ಆಕಳಿನ ಹಾಲು ಬೇಕು. ಇತ್ತೀಚೆಗೆ ಗೋವುಗಳ ಸಂತತಿ ಕಡಿಮೆಯಾಗುತ್ತಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಮಧ್ಯ ಪ್ರದೇಶಗಳಲ್ಲಿ ಗೋವಂಶವನ್ನು ಉಳಿಸುವ ಮತ್ತು ಗೋಹತ್ಯೆಯನ್ನು ತಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಗೋ ಮಾತೆಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ನೀಡಲೂ ಆಗ್ರಹಿಸಿದ್ದು, ಮೌಲನಾ ರಿಝ್ವಿ ಅವರು ಕೂಡ ಇದನ್ನ ಬೆಂಬಲಿಸಿದ್ದು, ರಾಷ್ಟ್ರದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ತಡೆಯಬೇಕು ಮತ್ತು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಕೇವಲ ಹಿಂದೂಗಳ ಸಮಾಧಾನಕ್ಕೆ ಹೇಳಿಕೆಯನ್ನು ನೀಡದೇ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯ್ ಜಾಧವ್, ಎ.ಎನ್. ಕರಲಿಂಗಣ್ಣವರ, ಡಾ.ಸುಭಾಷ್ ಪಾಟೀಲ್, ಶ್ರೀದೇವಿ ಬುಡವಿ, ಆನಂದ ಕರಲಿಂಗಣ್ಣವರ, ಭಾವಕಣ್ಣಾ ಲೋಹಾರ್, ಸುನೀಲ್, ಕಿರಣ್ ಕಿಲ್ಲೇಕರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
