State

ನಾಳೆಯೊಳಗೆ ಸಿಎಂ ಸ್ಥಾನ ಫೈನಲ್…

Share

ರಾಜ್ಯ ರಾಜಕಾರಣದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸಿಎಂ ಆಯ್ಕೆ ಕಸರತ್ತು ನಾಳೆಯೊಳಗೆ ಅಂತ್ಯವಾಗುವ ಸಾಧ್ಯತೆಯಿದೆ. ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಸಚಿವ ಸಂಪುಟ ಕಸರತ್ತಿನ ಕುರಿತು ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇಂದು ಮಾಧ್ಯಮಗೋಷ್ಟಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು. ನಾಳೆ ವರೆಗೂ ಸಿಎಂ ಸ್ಥಾನ ನಿಶ್ಚಿತವಾಗಬಹುದು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ 2-3 ಹೆಸರುಗಳನ್ನು ಸೂಚಿಸಲಾಗಿದ್ದು, ಸೂಕ್ತವಾದ ಹೆಸರನ್ನು ಹೈಕಮಾಂಡ್ ನಿರ್ಧರಿಸಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಅಭಿಮಾನಿಗಳ ಒತ್ತಾಯಕ್ಕೆ ಪಕ್ಷ ಎಲ್ಲವನ್ನು ಅಂತಿಮವಾಗಿ ತಿರ್ಮಾನಿಸುತ್ತದೆ ಎಂದರು.

ಇನ್ನು ಸಚಿವ ಸಂಪುಟದಲ್ಲಿ ಹೊಸಬರು ಮತ್ತು ಹಳಬರು ಎಲ್ಲರೂ ಇರಬೇಕು. ಪಕ್ಷದಲ್ಲಿನ ಗೊಂದಲ ಬಗೆಹರಿದಿದೆ. ಸಮನ್ವಯ ಸಮಿತಿ ಬಗ್ಗೆ ಸಿದ್ಧರಾಮಯ್ಯನವರು ಹೈಕಮಾಂಡ್’ಗೆ ಇಟ್ಟ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಇದನ್ನು ಪಕ್ಷವೇ ತಿರ್ಮಾನಿಸಬೇಕು. ನಾಳೆಯ ವರೆಗೂ ಕಾಯ್ದು ನೋಡೋಣ ಎಂದರು. ಎಲ್ಲ ಪಕ್ಷಗಳಲ್ಲಿ ಸಚಿವ ಸ್ಥಾನ ಬೇಡಿಕೆಯಿರುವುದು ಸಹಜ. ಅಂತಿಮವಾಗಿ ಆಗುವುದು 34 ಸ್ಥಾನ ಅದನ್ನು ಮೀರಲು ಸಾಧ್ಯವಿಲ್ಲ. ಖಾತೆ ಬದಲಾಗುವ ಬಗ್ಗೆಯೂ ಗೊತ್ತಿಲ್ಲ. ಕ್ಯಾಪ್ಟನ್ ರೆಡಿ ಆದ ಮೇಲೆ ಮುಂದಿನ ಲೆಕ್ಕಾಚಾರ. ಪಕ್ಷದ ತಿರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.

Tags:

error: Content is protected !!