1. ವಡಗಾಂವನಲ್ಲಿ ಗಣೇಶನ ಪಾದ್ಯಪೂಜೆ ಅದ್ಧೂರಿ ಚಾಲನೆ
2. ಅಷ್ಟವಿನಾಯಕ ಮಂದಿರದಲ್ಲಿ ಭಕ್ತಿಮಯ ಧಾರ್ಮಿಕ ಪೂಜೆ
3. ವಿನಾಯಕ ಪಾಟೀಲರಿಂದ ಆಕರ್ಷಕ ಮೂರ್ತಿ ತಯಾರಿಕೆ
4. ಸಂಗೀತ ನೃತ್ಯದೊಂದಿಗೆ ಕಂಗೊಳಿಸಿದ ಅಷ್ಟವಿನಾಯಕ ನಗರ

ಕುಂದಾನಗರಿ ಬೆಳಗಾವಿಯಲ್ಲಿ ಈಗಲೇ ಗಣೇಶೋತ್ಸವದ ಸಂಭ್ರಮ ಆರಂಭವಾಗಿದೆ. ವಡಗಾಂವನ ಅಷ್ಟವಿನಾಯಕ ನಗರದಲ್ಲಿ ಗುರುವಾರ ಸಂಜೆ ಗಣೇಶನ ಪಾದ್ಯಪೂಜೆಯು ಅತ್ಯಂತ ಭಕ್ತಿಭಾವದಿಂದ ಜರುಗಿತು. ಈ ವಿಶೇಷ ಪೂಜೆಯೊಂದಿಗೆ ಈ ಬಾರಿಯ ಆಕರ್ಷಕ ಗಣೇಶ ಮೂರ್ತಿಗಳ ತಯಾರಿಕಾ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಬೆಳಗಾವಿಯ ವಡಗಾಂವನ ಅಷ್ಟವಿನಾಯಕ ನಗರದಲ್ಲಿ ಗುರುವಾರ ಸಂಜೆ ಗಣೇಶನ ಪಾದ್ಯಪೂಜೆ ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು. ಮೂರ್ತಿ ತಯಾರಿಕೆಯ ಆರಂಭದ ಸಂಕೇತವಾಗಿ ಅಷ್ಟವಿನಾಯಕ ಮಂದಿರದಲ್ಲಿ ಶ್ರೀ ಗಣೇಶನಿಗೆ ವಿಧಿವತ್ತಾದ ಪೂಜೆ ಸಲ್ಲಿಸಲಾಯಿತು. ಖ್ಯಾತ ಮೂರ್ತಿಕಾರ ವಿನಾಯಕ ಪಾಟೀಲ್ ಅವರು ಈ ಬಾರಿ ಅತ್ಯಂತ ಆಕರ್ಷಕ ಮತ್ತು ವಿಶೇಷವಾದ ಗಣೇಶನ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದು, ಪಾದ್ಯಪೂಜೆಯ ಮೂಲಕ ಈ ಕಲಾತ್ಮಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇಡೀ ಮಂದಿರದ ಆವರಣವು ಕಣ್ಮನ ಸೆಳೆಯುವ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರಲ್ಲಿ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಧುರವಾದ ಭಜನೆ ಮತ್ತು ಸಂಗೀತದ ಸುಧೆಯು ಇಡೀ ಅಷ್ಟವಿನಾಯಕ ನಗರವನ್ನು ಭಕ್ತಿಮಯ ವಾತಾವರಣದಲ್ಲಿ ಮುಳುಗಿಸಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಈ ಕುರಿತು ಅಷ್ಠವಿನಾಯಕ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಬೈಟ್ಈ ಬಾರಿಯ ಗಣೇಶನ ಆಗಮನ ಮತ್ತು ಮೂರ್ತಿ ತಯಾರಿಕೆಯ ಪ್ರತಿ ಹಂತವೂ ವಿಶೇಷವಾಗಿರಲಿದ್ದು, ಮಂಡಳಿಯ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಪಾದ್ಯಪೂಜೆಯ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

