• ಧಾಮಣೆ ಗ್ರಾಮದಲ್ಲಿ ತಲ್ವಾರ್‌ನಿಂದ ಭೀಕರ ಹಲ್ಲೆ
• ರೈತ ಜೀವಪ್ಪ ಗಾವಡೆ ಪರಿಸ್ಥಿತಿ ಗಂಭೀರ
• ಬೋರ್‌ವೆಲ್ ವಾಹನ ನಿಲ್ಲಿಸಿದಕ್ಕೆ ಗಲಾಟೆ
• ಪೊಲೀಸರ ವಿರುದ್ಧ ಹಲ್ಲೆಗೊಳಗಾದ ರೈತನ ಆಕ್ರೋಶ

ಬೆಳಗಾವಿ ತಾಲೂಕಿನ ಧಾಮಣೆ ಎಸ್. ಗ್ರಾಮದಲ್ಲಿ ಬೋರ್ ವೆಲ್ ಹಾಕುವಾಗ ವಾಹನ ಬೇರೆಯವರ ಜಮೀನಿನಲ್ಲಿ ನಿಲ್ಲಿಸಿದ್ದಕ್ಕೆ ರೈತ ಹಾಗೂ ಆತನ ಮಗನ ಮೇಲೆ ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಜೀವಪ್ಪ ಗಾವಡೆ ಎಂಬ ರೈತನ ಮೇಲೆ ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ್ದಾರೆ. ನಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಲು ಬಿಡದ ದುಷ್ಕರ್ಮಿಗಳು ನಮ್ಮ ಜಮೀನು ಕಬ್ಜಾ ಮಾಡಲು ಹುನ್ನಾರ ನಡೆಸಿದ್ದರು. ಪದೇ ಪದಣೆ ನಮ್ಮ ಮೇಲೆ ದಬ್ಬಾಳಿಕೆ ಜಮೀನು ವಶಪಡಿಸುವ ಹುನ್ನಾರ ನಡೆಸಿದ್ದರು. ಆಗಾಗ ಅವರ ನಡುವೆ ಜಗಳ ಆಗುತ್ತಿತ್ತು. ಆದರೆ ಇಂದು ಬೆಳಗ್ಗೆ ಏಕಾಏಕಿ ಬಂದು ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ್ದು, ಜೀವಪ್ಪ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆದಾಖಲಿಸಿದ್ದಾರೆ. ಹಲ್ಲೆ ನಡೆಸುವ ಸಾಧ್ಯತೆ ಇದೆ. ನಮಗೆ ರಕ್ಷಣೆ ನೀಡುವಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಕ್ಷಣೆ ನೀಡುವಂತೆ ಮನವಿ ಮಾಡಿದರೂ ನಮಗೆ ಸ್ಪಂದಿಸಲಿಲ್ಲ ಎಂದು ಅನಿಲ್ ಗಾವಡೆ ಆರೋಪಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
