Belagavi

ಅಕ್ರಮ ಮರಳುಗಾರಿಕೆ ತಡೆಗೆ ಎಸ್ಪಿ ಕೆ. ರಾಮರಾಜನ್ ಖಡಕ್ ವಾರ್ನಿಂಗ್ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧವೇ ಕ್ರಮದ ಎಚ್ಚರಿಕೆ

Share

• ಅಕ್ರಮ ಮರಳುಗಾರಿಕೆ ವಿರುದ್ಧ ಎಸ್ಪಿಯಿಂದ ವಾರ್ನಿಂಗ್
• ಇಲಾಖೆಯ ಅಧಿಕಾರಿಗಳಿಗೂ ಎಸ್ಪಿ ಕೆ. ರಾಮರಾಜನ್ ಎಚ್ಚರಕೆ
• ಅಕ್ರಮ ತಡೆಗೆ ವಿಶೇಷ ತಂಡಗಳ ರಚನೆ
• ಕರ್ತವ್ಯ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ

ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಅಕ್ರಮದ ವಿರುದ್ಧ ದೂರು ದಾಖಲಿಸಲು ವಿಳಂಬ ಮಾಡುವ ಪೊಲೀಸ್ ಸಿಬ್ಬಂದಿಯ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಇಂದಿಲ್ಲಿ ಖಡಕ್ ಸಂದೇಶ ರವಾನಿಸಿದ್ದಾರೆ.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಸ್ಪಿ, ಕೆ.ರಾಮರಾಜನ್ ಅವರು ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಮರಳುಗಾರಿಕೆ-ಗಣಿಗಾರಿಕೆಗೆ ಅವಕಾಶವಿಲ್ಲ. ಎಲ್ಲಿಯೇ ಅಕ್ರಮ ನಡೆದರೂ ತಾವೂ ಸ್ವತಃ ಬಂದು ತನಿಖೆ ನಡೆಸುತ್ತೇವೆ. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿ ತಪಾಸಣೆಯನ್ನು ನಡೆಸಲಾಗುತ್ತಿದೆ. ಈಗಾಗಲೇ ಒಂದು ದೂರು ಬಂದಿತ್ತು, ಇದರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ರಮವಾಗಿ ಪಡೆದ ಸ್ವತ್ತಿನ ತೆರಿಗೆಯನ್ನು ಪಾವತಿಸಬೇಕು. ಎಲ್ಲಿಯಾದರೂ ಈ ರೀತಿಯ ಅಕ್ರಮವಾಗಿ ಗಣಿಗಾರಿಕೆ ನಡೆದರೇ, ಬೀಟ್ ಕಾನ್ಸಟೇಬಲ್, ಸಬ್ ಇನ್ಸಪೇಕ್ಟರ್ ಮತ್ತು ಇನ್ಸಪೇಕ್ಟರ್ ಜವಾಬ್ದಾರರಾಗುತ್ತಾರೆ. ಕೂಡಲೇ ಅವರು ಅಕ್ರಮದ ವಿರುದ್ಧ ದೂರು ದಾಖಲಿಸದಿದ್ದರೇ, ಅವರ ವಿರುದ್ಧವೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

Tags:

error: Content is protected !!