Belagavi

ಮೇ 17ಕ್ಕೆ ‘ಸ್ವಚ್ಛ ಬೆಳಗಾವಿ’ ಅಭಿಯಾನ-ಸಾಂಸ್ಕೃತಿಕ ಕಾರ್ಯಕ್ರಮ; ಶಿವಾನಂದ ನೀಲಣ್ಣವರ 25 ಸಾವಿರ ಕಾರ್ಯಕರ್ತರಿಂದ ನಡೆಯಲಿದೆ ಶ್ರಮದಾನ

Share

• ಮೇ 17ಕ್ಕೆ ‘ಸ್ವಚ್ಛ ಬೆಳಗಾವಿ’ ಅಭಿಯಾನ
• 25 ಸಾವಿರ ಕಾರ್ಯಕರ್ತರಿಂದ ಶ್ರಮದಾನ
• ಶಿವಾನಂದ ನೀಲಣ್ಣವರ ಅವರ ವಿನೂತನ ಪ್ಲ್ಯಾನ್
• ಬೆಳಗಾವಿ ಸ್ವಚ್ಛತೆಗೆ ಜನರ ಸಹಕಾರಕ್ಕೆ ಕರೆ

ಮೇ 17 ರಂದು 25 ಸಾವಿರ ಕಾರ್ಯಕರ್ತರೊಂದಿಗೆ ಸ್ವಚ್ಛ ಬೆಳಗಾವಿ ಅಭಿಯಾನವನ್ನು ನಡೆಸಲಾಗುವುದೆಂದು ಶಿವಂ ಅಸೋಸಿಯೇಟ್ಸ್’ನ ಶಿವಾನಂದ ನೀಲಣ್ಣವರ ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮೇ 17 ರಂದು 25 ಸಾವಿರ ಕಾರ್ಯಕರ್ತರೊಂದಿಗೆ ಬೆಳಿಗ್ಗೆ 8 ರಿಂದ ಮಧ್ಯಾನ್ಹ 12 ಗಂಟೆಯ ವರೆಗೆ ಬೆಳಗಾವಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾನ್ಹದ ಭೋಜನ ನಡೆಯಲಿದ್ದು, ರಾತ್ರಿ ಸರದಾರ್ಸ್ ಮೈದಾನದಲ್ಲಿ ಮನೋರಂಜನೆ ಕಾರ್ಯಕ್ರಮ ಜೊತೆಗೆ ಭೋಜನವನ್ನು ಆಯೋಜಿಸಲಾಗಿದೆ. ಬೆಳಗಾವಿಗರು ಇದರಲ್ಲಿ ಉತ್ಸಾಹದಿಂದ ಕೈಜೋಡಿಸಿ ಬೆಳಗಾವಿಯನ್ನು ಸ್ವಚ್ಛ ಸುಂದರ ಹಸಿರಾಗಿಸೋಣ ಎಂದು ಕರೆ ನೀಡಿದರು.

Tags:

error: Content is protected !!