• ಹ್ಯೂಮ್ ಪಾರ್ಕ್‌ನಲ್ಲಿ ಮೂರು ದಿನಗಳ ಮಾವು ಮೇಳ
• 24 ಮಳಿಗೆಗಳಲ್ಲಿ ರೈತರಿಂದ ನೇರ ಮಾರಾಟ
• ದೇವಗಢ, ಕೊಲ್ಹಾಪುರ ಮಾವುಗಳಿಗೂ ಮೇಳದಲ್ಲಿ ಸ್ಥಾನ
• ಸಾವಯವ ಪದ್ಧತಿಯ ಹಣ್ಣುಗಳಿಗೆ ಭರ್ಜರಿ ಬೇಡಿಕೆ

ಮಾವಿನ ಹಣ್ಣಿನ ಪ್ರೇಮಿಗಳಿಗೆ ಬೆಳಗಾವಿ ಜಿಲ್ಲಾಡಳಿತ ಸಿಹಿ ಸುದ್ದಿ ನೀಡಿದೆ. ನಗರದ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್‌ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ‘ಮಾವು ಮೇಳ’ ಆಯೋಜಿಸಲಾಗಿದ್ದು, ನೇರವಾಗಿ ರೈತರಿಂದಲೇ ಗ್ರಾಹಕರು ತಾಜಾ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಬೆಳಗಾವಿಯ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕನಲ್ಲಿ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾವು ಮೂರು ದಿನಗಳ ಮೇಳವನ್ನು ಆಯೋಜಿಸಲಾಗಿದ್ದು, ಇಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಜಿ.ಪಂ. ಸಿಇಓ ರಾಹುಲ್ ಶಿಂಧೆ, ಐಜಿಪಿ ಚೇತನ್’ಸಿಂಗ್ ರಾಥೋರ್, ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇನ್ನುಳಿದ ಗಣ್ಯರು ಚಾಲನೆಯನ್ನು ನೀಡಿದರು.
ಈ ಕುರಿತು ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾವು ಮೂರು ದಿನಗಳ ಮೇಳವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು, ಒಟ್ಟು 24 ಮಳಿಗೆಗಳನ್ನು ರೈತರು ಸ್ಥಾಪಿಸಿದ್ದಾರೆ. ಬೆಳಗಾವಿ ಮಹಾಜನರು ಈ ಮೇಳಕ್ಕೆ ಭೇಟಿ ನೀಡಿ ಸಾವಯವ ಪದ್ಧತಿಯಿಂದ ಬೆಳೆದ ಮಾವುಗಳನ್ನು ಖರೀದಿಸಬೇಕೆಂದರು. ಇದರಲ್ಲಿ ಬೆಳಗಾವಿ, ಧಾರವಾಡ, ದೇವಗಢ, ಕೊಲ್ಹಾಪುರದಿಂದಲೂ ಮಾವು ಬೆಳೆಗಾರರು ಇದರಲ್ಲಿ ಭಾಗಿಯಾಗಿದ್ದು, ಮಧ್ಯವರ್ತಿಗಳಿಲ್ಲದೇ ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ಒದಗಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ‘ಬೆಳಗಾವಿ ಮಾವಿಗೆ’ ಉತ್ತೇಜನ ನೀಡಲಾಗುತ್ತಿದೆ. ಗ್ರಾಹಕರ ಬೇಡಿಕೆ ಹೆಚ್ಚಾದರೇ ಮೇಳದ ಅವಧಿಯನ್ನು ಹೆಚ್ಚಿಸುವುದಾಗಿ ತಿಳಿಸಿದರು. ಬೈಟ್
ಬೆಳಗಾವಿಯ ಸಂತಿಬಸ್ತವಾಡದ ಮಾವು ಬೆಳೆಗಾರ ರೈಫ್ ಬಾಗವಾನ ಅವರು ತಮ್ಮ ತೋಪಿನಲ್ಲಿ ಬೆಳೆದ ವಿವಿಧ ಮಾವುಗಳ ಮಾಹಿತಿ ನೀಡಿ, ಸಗಟು ದರದಲ್ಲಿ ಮಾವುಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಇವು ಸಾವಯವ ಪದ್ಧತಿಯಿಂದ ಬೆಳೆದ ಮಾವುಗಳಾಗಿವೆ. ರೂ.350 ಯಿಂದ 500-600 ವರೆಗೆ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು. ಬೈಟ್
ಬೆಳಗಾವಿ ತಾಲೂಕಿನ ಖಾನಾಪೂರ ತಾಲೂಕಿನ ಮಾವು ಬೆಳೆಗಾರ ರಾಜೇಶ್ ಸಾವಳೆಕರ ಅವರು ಸಾವಯವ ಪದ್ಧತಿಯಿಂದ ಮಾವುಗಳನ್ನು ಬೆಳೆದು, ಸಂರಕ್ಷಿಸಿ ಅವುಗಳನ್ನು ಹಣ್ಣಾಗಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಬ್ಯಾಗಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಹೆಚ್ಚಾಗಿದ್ದು, ಪರರಾಜ್ಯದಲ್ಲಿಯೂ ಇವು ಖ್ಯಾತಿಯನ್ನು ಪಡೆದಿವೆ ಎಂದರು. ಬೈಟ್
ಇನ್ನು ಗ್ರಾಹಕರು ಕೂಡ ತಮ್ಮ ನೆಚ್ಚಿನ ಮಾವುಗಳನ್ನು ಅತ್ಯಂತ ಉತ್ಸಾಹದಿಂದ ಖರೀದಿಸಿ ಸಂತಸ ಪಟ್ಟರು. ಬೈಟ್
