Belagavi

ಶ್ರಮಪಟ್ಟರೆ ಜಯ ನಿಶ್ಚಿತ; ಭಗೀರಥರ ಆದರ್ಶ ಪಾಲಿಸಿ: ಬೆಳಗಾವಿಯಲ್ಲಿ ಉಮಾ ಉಪ್ಪಾರ ಕರೆ ಬೆಳಗಾವಿಯಲ್ಲಿ ಸಾಂಕೇತಿಕ ಭಗೀರಥ ಜಯಂತಿ ಆಚರಣೆ

Share

• ಭಗೀರಥರ ತತ್ವಾದರ್ಶ ಪಾಲಿಸಲು ಉಮಾ ಉಪ್ಪಾರ ಕರೆ
• ಶ್ರಮ ಸಂಸ್ಕೃತಿಯಿಂದಲೇ ಯಶಸ್ಸು ಸಾಧ್ಯ: ಉಪನ್ಯಾಸಕಿ ಉಪ್ಪಾರ
• ಸಚಿವ ಡಿ. ಸುಧಾಕರ್ ನಿಧನಕ್ಕೆ ಶ್ರದ್ಧಾಂಜಲಿ
• ಬೆಳಗಾವಿಯಲ್ಲಿ ಸಾಂಕೇತಿಕ ಭಗೀರಥ ಜಯಂತಿ ಆಚರಣೆ

ಶ್ರಮಪಟ್ಟರೆ ಜಯ ನಿಶ್ಚಿತ. ಮಹರ್ಷಿಗಳ ಶ್ರಮ ಸಂಸ್ಕೃತಿಯನ್ನು ಸಮಾಜ ಅಳವಡಿಸಿಕೊಳ್ಳಬೇಕು ಎಂದು ಉಮಾ ಉಪ್ಪಾರ ಅವರು ಕರೆ ನೀಡಿದರು.

ಇಂದು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ಭಗೀರಥರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಇಂದು ನಿಧನರಾದ ಸಚಿವ ಡಿ. ಸುಧಾಕರ್ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಹೊಸದುರ್ಗದ ಭಗೀರಥಪೀಠದ ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಜೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಬೆಂಗಳೂರಿನ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರು ಉದ್ಘಾಟನಾಪರ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.

ಈ ವೇಳೆ ಉಪನ್ಯಾಸವನ್ನು ನೀಡಿದ ಉಮಾ ಉಪ್ಪಾರ ಅವರು, ಭಗೀರಥರ ಹೆಸರು ಕೇಳಿ ಬರುತ್ತಲೇ ಉಪ್ಪಾರ ಸಮಾಜ ಎಲ್ಲರಿಗೂ ನೆನಪಾಗುವಂತಹ ಕಾರ್ಯವನ್ನು ಮಾಡಬೇಕು. ಭಗೀರಥ ಮುನಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಗೀರಥರ ಉಲ್ಲೇಖವನ್ನು ರಾಮಾಯಣದಲ್ಲಿಯೂ ಇದೆ. ಶ್ರಮಪಟ್ಟಾಗ ಜಯ ಸಿಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ ಎಂದರು.

ಇದೇ ವೇಳೆ ಪ್ರತಿಭಾ ಪುರಸ್ಕಾರ ಕೂಡ ನಡೆಯಿತು. ಎಚ್.ಬಿ. ಹುಲ್ಲೋಳ್ಳಿ ಮತ್ತು ಜಿ.ಕೆ. ಉಪ್ಪಾರ ಅವರು ನಿರೂಪಿಸಿದರು. ಸ್ವಾತಿ ಕಿಡದಾಳ ಅವರು ಮೊದಲಿಗೆ ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕರಾದ ಬಸವರಾಜ್ ತುಳಸಿಗೇರಿ ಅವರು ಗಣ್ಯರು ಸ್ವಾಗತಿಸಿದರು. ಈ ವೇಳೆ ಉಪ್ಪಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!