Belagavi

ಕನ್ನಡ ಬ್ಯಾನರ್ ಹರಿದವರ ವಿರುದ್ಧ ರೌಡಿಶೀಟರ್ ಕೇಸ್ ದಾಖಲಿಸಿ…ಇಲ್ಲದಿದ್ದರೇ ಕಾಕತಿ ಪೊಲೀಸ್ ಠಾಣೆಗೆ ಮುತ್ತಿಗೆ ಕರ್ನಾಟಕ ರಕ್ಷಣೆ ವೇದಿಕೆ ಯುವ ಸೇನೆಯಿಂದ ಪ್ರತಿಭಟನೆ

Share

• ಬಂಬರಗೆಯಲ್ಲಿ ಕನ್ನಡ ಬ್ಯಾನರ್ ಹರಿದು ಅವಮಾನ
• ಕರ್ನಾಟಕ ರಕ್ಷಣೆ ವೇದಿಕೆ ಯುವ ಸೇನೆ ಕಿಡಿ
• ರೌಡಿ ಶೀಟ್ ಹಾಕದಿದ್ದರೆ ಠಾಣೆಗೆ ಮುತ್ತಿಗೆ
• ಕನ್ನಡ ದ್ರೋಹಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗಲಿ
ಬೆಳಗಾವಿ ತಾಲೂಕಿನ ಬಂಬರಗೆ ಗ್ರಾಮದಲ್ಲಿ ಕನ್ನಡ ಭಾಷೆಯ ಬ್ಯಾನರ್ ಹರಿದು ಹಾಕಿರುವ ಘಟನೆ ಭಾಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಕರ್ನಾಟಕ ರಕ್ಷಣೆ ವೇದಿಕೆ ಯುವ ಸೇನೆಯ ಪದಾಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಬರಗೆ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಜಾತ್ರೆ ನಿಮಿತ್ತ ಗಣ್ಯರನ್ನು ಸ್ವಾಗತಿಸಲು ಹಾಕಲಾಗಿದ್ದ ಕನ್ನಡ ಭಾಷೆಯ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿ ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯದ ವಿರುದ್ಧ ಕರ್ನಾಟಕ ರಕ್ಷಣೆ ವೇದಿಕೆ ಯುವ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಾಳಪ್ಪ ಗುಡುಗೇನಟ್ಟಿ ಹಾಗೂ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಕಾಕತಿ ಪೊಲೀಸರಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರು ಮತ್ತು ಇತರ ಕನ್ನಡಪರ ಹೋರಾಟಗಾರರು ಠಾಣೆಗೆ ಭೇಟಿ ನೀಡಿ, ಕನ್ನಡ ವಿರೋಧಿ ಕೃತ್ಯ ಎಸಗಿದ ಯುವಕರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕನ್ನಡ ಭಾಷೆಯ ಅಸ್ಮಿತೆಗೆ ಧಕ್ಕೆ ತಂದಿರುವ ಕಿಡಿಗೇಡಿಗಳ ವಿರುದ್ಧ ಕೇವಲ ಕೇಸ್ ದಾಖಲಿಸುವುದಷ್ಟೇ ಅಲ್ಲದೇ, ಅವರ ವಿರುದ್ಧ ರೌಡಿ ಶೀಟ್ ತೆರೆಯಬೇಕೆಂದು ಸಂಘಟನೆಯು ಆಗ್ರಹಿಸಿದೆ. ಒಂದು ವೇಳೆ ಪೊಲೀಸರು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದರೆ, ಕಾಕತಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಮತ್ತು ಬಂಬರಗೆ ಗ್ರಾಮದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಜಿಲ್ಲಾಧ್ಯಕ್ಷ ಬಾಳಪ್ಪ ಗುಡುಗೇನಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ. ಬೈಟ್
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣೆ ವೇದಿಕೆ ಯುವ ಸೇನೆಯ ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!