ಐಜಿಪಿ ಸಂದೀಪ್ ಪಾಟೀಲ್ ಸಾಹಸದ ಓಟ
ಸಿಡ್ನಿಯಲ್ಲಿ ಅರಳಿದ ವಿಜಯದ ಪತಾಕೆ ನೋಡಿ
ಆರನೇ ಬಾರಿ ಐರನ್ ಮ್ಯಾನ್ ಸಾಧನೆ
ಖಡಕ್ ಅಧಿಕಾರಿಯ ಫಿಟ್ನೆಸ್ ಮಂತ್ರ ಯಶಸ್ವಿ

ಕರ್ತವ್ಯದ ಜೊತೆಗೆ ಫಿಟ್‌ನೆಸ್ ವಿಷಯದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಐಜಿಪಿ ಸಂದೀಪ್ ಪಾಟೀಲ್ ಅವರು ಈಗ ಸಿಡ್ನಿಯಲ್ಲಿ ತಮ್ಮ 6ನೇ ಐರನ್ ಮ್ಯಾನ್ 70.3 ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ನಾಡಿಗೆ ಹೆಮ್ಮೆ ತಂದಿದ್ದಾರೆ.

ಸತತ ಪರಿಶ್ರಮ ಮತ್ತು ಅದಮ್ಯ ಚೇತನಕ್ಕೆ ಮತ್ತೊಂದು ಹೆಸರೇ ಐಜಿಪಿ ಸಂದೀಪ್ ಪಾಟೀಲ್. ಗೋವಾ, ಥೈಲ್ಯಾಂಡ್, ಪೋಲೆಂಡ್, ಟರ್ಕಿ ಮತ್ತು ಕೋಪನ್ ಹ್ಯಾಗನ್ ನಂತರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಕಠಿಣ ‘ಐರನ್ ಮ್ಯಾನ್ 70.3’ ರೇಸ್ ಅನ್ನು ಪೂರ್ಣಗೊಳಿಸುವ ಮೂಲಕ ಅವರು ತಮ್ಮ 6ನೇ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಜಿಪ್ಟ್‌ನಿಂದ ಹಿಡಿದು ಸಿಡ್ನಿಯವರೆಗಿನ ಈ ಸುದೀರ್ಘ ಪಯಣವು ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಬದಲಾಗಿ ಶಿಸ್ತು ಮತ್ತು ಸ್ಥಿರತೆಗೆ ಸಂದ ಜಯವಾಗಿದೆ. ಸತತ ಓಟ, ಈಜು ಮತ್ತು ಸೈಕ್ಲಿಂಗ್ ಒಳಗೊಂಡ ಈ ಜಗತ್ತಿನ ಕಠಿಣ ಸ್ಪರ್ಧೆಯನ್ನು ಲೀಲಾಜಾಲವಾಗಿ ಗೆದ್ದ ಪಾಟೀಲ್ ಅವರು ಯುವ ಪೀಳಿಗೆಗೆ ಮತ್ತು ಪೊಲೀಸ್ ಇಲಾಖೆಗೆ ಮಾದರಿಯಾಗಿದ್ದಾರೆ.
