• ಬಿಎಸ್ಎಫ್ ಅಭ್ಯರ್ಥಿಗಳ ಭವಿಷ್ಯಕ್ಕೆ ಕುತ್ತು
• ತರಬೇತಿ ಮುಗಿದರೂ ಯುವಕರು ಮನೆಗೆ
• ಸ್ಕಿಲ್ ಸರ್ಟಿಫಿಕೇಟ್ ನೆಪದಲ್ಲಿ ವಜಾ ಶಿಕ್ಷೆ
• ಬಡ ಯುವಕರ ಬದುಕು ಈಗ ಬೀದಿಗೆ

ಬಿಎಸ್ಎಫ್ ನಲ್ಲಿ ಕರೆಯಲಾದ 2023ರ ಹುದ್ದೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ತರಬೇತಿ ಪಡೆದ ಬಳಿಕ ಅರ್ಹತೆ ಪತ್ರ ತಿರಸ್ಕಾರವಾಗಿದೆ ಎಂದು ಸಾಕಷ್ಟು ಅಭ್ಯರ್ಥಿಗಳಿಗೆ ಸೇವೆಯಿಂದ ಬಿಡುಗಡೆ ಮಾಡಿ ವಂಚನೆಯಾಗಿದೆ ಎಂದು ಡಾ.ಗಿರಿರಾಜ್ ಎನ್.ಶಿಂಧೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳು ಅರ್ಹತೆ ಪತ್ರದಿಂದ ನೇಮಕವಾಗಿಲ್ಲ. ಸಾಕಷ್ಟು ಶ್ರಮ ಪಟ್ಟು ಎಲ್ಲ ಪರೀಕ್ಷೆಯಲ್ಲಿ ನೇಮಕವಾಗಿರುತ್ತಾರೆ. ಆದರೆ ಸ್ಕೀಲ್ ಸರ್ಟಿಫಿಕೇಟ್ ಸಲುವಾಗಿ ಅವರನ್ನು ಸೇವೆಯನ್ನು ತೆಗೆದುಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿ ನೂರಾರು ಯುವಕರು ಬೀದಿಪಾಲಾಗಿದ್ದಾರೆ. ಸರಕಾರ ಕೂಡಲೇ ಇವರನ್ನು ಕೌನ್ಸಿಲಿಂಗ್ ಮಾಡಿ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಡ ಯುವಕರಿಗೆ ಅನ್ಯಾಯವಾಗಬಾರದು. ಕೇಂದ್ರ ಸರಕಾರ ತಾಂತ್ರಿಕ ಕಾರಣದಿಂದ ಸ್ಕೀಲ್ ಸರ್ಟಿಫಿಕೇಟ್ ನಿಂದ ಮಾತ್ರ ಅವರನ್ನು ಹುದ್ದೆಯನ್ನು ವಜಾ ಮಾಡಬಾರದು ಎಂದರು.
