• ಬೆಳಗಾವಿಯಲ್ಲಿ ಆಮೆಗತಿಯ ರಸ್ತೆ ಕಾಮಗಾರಿ
• ಕೆಸರು ಗದ್ದೆಯಾದ ಆಝಾದ್ ನಗರ ಸರ್ವಿಸ್ ರಸ್ತೆ
• ರಸ್ತೆಯಲ್ಲಿ ಸಿಲುಕುತ್ತಿರುವ ವಾಹನಗಳು; ಜನ ಪರದಾಟ
• ಅಭಿವೃದ್ಧಿ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟ

ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆ ಬೆಳಗಾವಿ ಆಝಾದ್ ನಗರದ ಬಳಿಯ ಸರ್ವಿಸ್ ರಸ್ತೆಯಲ್ಲಿ ಪ್ರತಿದಿನ ವಾಹನಗಳು ಸಿಲುಕಿ ಹಾಕಿಕೊಂಡು ಜನರು ಸಂಕಷ್ಟ ಅನುಭವಿಸುತ್ತಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಜನಹಿತವನ್ನು ಕಾಪಾಡಬೇಕೆಂದು ಜನಾಗ್ರಹ ಕೇಳಿಬಂದಿದೆ.

ಬೆಳಗಾವಿಯ ಆಝಾದ್’ನಗರದ ಬಳಿ ಹಣ್ಣು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆಯ ಬಳಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೇ, ಕಾಮಗಾರಿಯೂ ಆಮೆಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆ ರಸ್ತೆಯೂ ಹದಗೆಟ್ಟಿದ್ದು, ಕೆಸರು ಗದ್ದೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆ ಪ್ರತಿದಿನ ಹಲವಾರು ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಜನರು ತೊಂದರೆಗಿಡಾಗುತ್ತಿದ್ದಾರೆ. (ಫ್ಲೋ)
ಕಳೆದ 2 ವರ್ಷಗಳಿಂದ ವಿಳಂಬವಾಗಿದ್ದು, ಜನರಿಗೆ ಅನಾನೂಕೂಲವಾಗುತ್ತಿದೆ. ಕಳೆದ ಬಾರಿ ಇಬ್ಬರು ಕಾರ್ಮಿಕರು ಇದಕ್ಕೆ ಬಲಿಯಾಗಿದ್ದಾರೆ. ಪ್ರತಿದಿನ 3-4 ವಾಹನಗಳು ರಸ್ತೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದು, ದ್ವಿಚಕ್ರವಾಹನ ಸವಾರರಿಗೂ ಸಂಕಷ್ಟ ತಪ್ಪಿದ್ದಲ್ಲ. ಇದರಿಂದಾಗಿ ಇಲ್ಲಿನ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಯಾರೂ ನಮ್ಮ ಕಷ್ಟವನ್ನು ಕೇಳುತ್ತಿಲ್ಲವೆಂದು ಇಲ್ಲಿನ ಸ್ಥಳೀಯ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಇನ್ನೋರ್ವರು ಮಾತನಾಡಿ, ಮಹಾಂತೇಶನಗರದಿಂದ ಗಾಂಧಿನಗರದ ವರೆಗಿನ ಸೇತುವೆಗೆ ಹೊಂದಿಕೊಂಡಂತೆ ಇರುವ ಸರ್ವಿಸ್ ರಸ್ತೆಯಲ್ಲಿನ ಸಂಚಾರ ಕಳೆದ 2 ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಹಿನ್ನೆಲೆ ಧೂಳಿನ ಸಾಮ್ರಾಜ್ಯವೇ ಇಲ್ಲಿ ನಿರ್ಮಾಣವಾಗಿದ್ದು, ಪ್ರತಿದಿನ ಜನರ ವಾಹನಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಇಲ್ಲಿನ ಜನರು ದೂರಿದರು.
ಕೂಡಲೇ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿ ಜನಹಿತವನ್ನು ಕಾಪಾಡಬೇಕೆಂಬುದು ಬೆಳಗಾವಿಗರ ಬೇಡಿಕೆಯಾಗಿದೆ.
