BELAGAVI

ಬೆಳಗಾವಿ ₹4,500 ಕೋಟಿ ವಂಚನೆ ಕೇಸ್: ಬೆಂಗಳೂರಿನಿಂದ ಬೆಳಗಾವಿಗೆ ಮರಳಿದ ಶಿವಾನಂದ ನೀಲಣ್ಣವರ

Share

ಠೇವಣಿದಾರರ ಹಣ ಹೂಡಿಕೆಯಿಂದ ಬೆಳಗಾವಿ ಉತ್ಸವ ಮಾಡಿ ವಂಚನೆ ಆರೋಪದಲ್ಲಿ ಸಿಐಡಿ ತನಿಖೆ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ ಕಡೆಯಿಂದ ಐಷಾರಾಮಿ ಕಾರ್ ಉಡುಗೊರೆ ಪಡೆದಿದ್ದ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಮಂಗಳವಾರ ಮಾಳಮಾರುತಿ ಪೊಲೀಸ್ ಠಾಣೆಗೆ ಹಾಜರುಪಡಿಸಿ ಸಿಐಡಿ ತನಿಖೆ ಎದುರಿಸಲಿದ್ದಾನೆ.

ಬೆಳಗಾವಿಯಲ್ಲಿ ಸಂಚಲನ ಮೂಡಿಸಿರುವ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣ ಸಂಬಂಧ ಸಿಐಡಿ ತಂಡ ಮಾಳಮಾರುತಿ ಪೊಲೀಸ್ ಠಾಣೆಗೆ ಆಗಮಿಸಿದೆ.
ಪ್ರಕರಣದ ತನಿಖೆಯ ಭಾಗವಾಗಿ ನಟ ಹಾಗೂ ಕರವೇ ಜಿಲ್ಲಾ ಅಧ್ಯಕ್ಷ ಅಭಿಲಾಷ್ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಸಿಐಡಿ ಡಿವೈಎಸ್ಪಿ ಅವರು ಇಂದು ವಿಚಾರಣೆಗೆ ಹಾಜರಾಗುವಂತೆ ಅಭಿಲಾಷ್‌ಗೆ ನೋಟಿಸ್ ನೀಡಿದ್ದರು.

ಈ ಹಿಂದೆ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ ಪತ್ನಿ ಹಾಗೂ ಪಾಲುದಾರ ಸುಭಾಷ್ ಸೇರಿದಂತೆ ಅಭಿಲಾಷ್‌ಗೂ ನೋಟಿಸ್ ಜಾರಿಗೊಳಿಸಲಾಗಿತ್ತು. ತನಿಖೆ ವೇಳೆ ಶಿವಾನಂದ ನೀಲಣ್ಣವರ ಅವರು ಅಭಿಲಾಷ್‌ಗೆ ದುಬಾರಿ ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿ ಬೆಳಕಿಗೆ ಬಂದಿತ್ತು.
ಬೆಳಗಾವಿ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ ಬಳಿಕ ಸುಮಾರು 17 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಕಾರನ್ನು ನೀಲಣ್ಣವರ ಅಭಿಲಾಷ್‌ಗೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನ ಖರೀದಿ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿತ್ತು.
ಪ್ರಕರಣದ ಹಣಕಾಸು ವ್ಯವಹಾರಗಳು ಹಾಗೂ ಉಡುಗೊರೆಯಾಗಿ ನೀಡಲಾದ ಕಾರಿನ ಹಿನ್ನೆಲೆ ಕುರಿತು ಸಿಐಡಿ ಅಧಿಕಾರಿಗಳು ಅಭಿಲಾಷ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

Tags:

error: Content is protected !!