Belagavi

ರಸ್ತೆಯಲ್ಲಿ ಸಿಕ್ಕ ಮೂರು ಲಕ್ಷ ಹಣವಿದ್ದ ಬ್ಯಾಗ್ ಪೊಲೀಸರಿಗೆ ಒಪ್ಪಿಸಿದ ಮಹಿಳೆ

Share

• ರಸ್ತೆಯಲ್ಲಿ ಸಿಕ್ಕ 3 ಲಕ್ಷ ಹಣ ವಾಪಸ್
• ಸಲ್ಮಾ ಭಾನು ಪ್ರಾಮಾಣಿಕತೆಗೆ ಒಲಿದ ಜೈಕಾರ
• ಆಸ್ಪತ್ರೆ ರಸ್ತೆಯಲ್ಲಿ ಪತ್ತೆಯಾಗಿತ್ತು ಹಣದ ಬ್ಯಾಗ್
• ವಾರಸುದಾರರ ಪತ್ತೆಗೆ ಗಾಂಧಿ ಚೌಕ್ ಪೊಲೀಸರ ಕಸರತ್ತು

ವಿಜಯಪುರ ನಗರದ ಮುಂಡೆವಾಡಿ ಆಸ್ಪತ್ರೆಯ ರಸ್ತೆಯಲ್ಲಿ ಮೂರು ಲಕ್ಷ ರೂಪಾಯಿ ಮೌಲ್ಯದ ಹಣದ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ನಗರದ ಸಲ್ಮಾ ಭಾನು ಎಂಬುವರು ಗಾಂಧಿ ಚೌಕ್ ಪೊಲೀಸ್‌ ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಹಣದ ಬ್ಯಾಗ್ ಅದರ ಸಂಬಂಧಪಟ್ಟ ವಾರಸುದಾರರಿಗೆ ತಲುಪಬೇಕು ಎಂದು ಅವರು ಹೇಳಿದರು.

ಪೊಲೀಸರು ಹಣದ ಬ್ಯಾಗ್‌ ವಾರಸುದಾರರಿಗೆ ತಲುಪಿಸುವ ಭರವಸೆ ನೀಡಿದ್ದಾರೆ. ಸಲ್ಮಾ ಭಾನು ಅವರ ಈ ಕಾರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ. ಇನ್ನೂ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ದರ್ಗಾದಲ್ಲಿರುವ ತಮ್ಮ ಮನೆಯಿಂದ ಹೊಸ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದಾಗ, ಮುಂದೆ ವಾಡೆ ಆಸ್ಪತ್ರೆಯ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಗಮನಿಸಿದರು. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಹಣವಿತ್ತು. ಆ ಹಣವನ್ನು ಗಾಂಧಿ ಚೌಕ ಪೊಲೀಸರಿಗೆ ಒಪ್ಪಿಸಿ, ಸಂಬಂಧಪಟ್ಟ ವಾರಸುದಾರರನ್ನು ಪತ್ತೆ ಮಾಡಿ ಅವರಿಗೆ ತಲುಪಿಸುವಂತೆ ಮನವಿ ಮಾಡಿದರು. ಆಸ್ಪತ್ರೆ ಬಳಿ ಬಿದ್ದಿದ್ದರಿಂದ ಅದು ರೋಗಿಗಳ ಹಣವಿರಬಹುದು, ಅವರಿಗೆ ತೊಂದರೆಯಾಗಬಾರದು ಎಂಬ ಮಾನವೀಯತೆಯಿಂದ ಹಣದ ಬ್ಯಾಗ್‌ ಅನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದರು.

Tags:

error: Content is protected !!