ಅಥಣಿ ಪೊಲೀಸ್ ಠಾಣೆಗೆ ಐಜಿಪಿ ರಾಥೋರ್ ಭೇಟಿ; ಪತ್ತೆಯಾದ ಮೊಬೈಲ್ ಫೋನ್‌ಗಳು ವಾರಸುದಾರರಿಗೆ ಹಸ್ತಾಂತರ

ವಿಜಯಪುರದಲ್ಲಿ ಠಾಣೆಯ ಸಿಬ್ಬಂದಿಗಳೇ ಪಿ.ಎಸ್.ಐ ವಿರುದ್ಧ ಬರೆದ ಪತ್ರದ ಕುರಿತು ಪರಿಶೀಲನೆ ನಡೆಸಲಾಗುವುದೆಂದು ಉತ್ತರ ವಲಯದ ಐಜಿಪಿ ಚೇತನ್’ಸಿಂಗ್ ಅವರು ಹೇಳಿದರು.
ಅಥಣಿ ಪೊಲೀಸ್ ಠಾಣೆಗೆ ಉತ್ತರ ವಲಯದ ಐಜಿಪಿ ಚೇತನ್’ಸಿಂಗ್ ರಾಥೋರ್ ಅವರು ಭೇಟಿ ನೀಡಿದರು. ಸಿಇಐಆರ್ ಪೋರ್ಟಲ್ ನಲ್ಲಿ ದಾಖಲಾದ ದೂರಿನನ್ವಯ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಕಳೆದು ಹೋದ ಮತ್ತು ನಾಪತ್ತೆಯಾಗಿದ್ದ ಮೊಬೈಲ್’ಗಳನ್ನು ಪತ್ತೆ ಮಾಡಲಾಗಿದ್ದು, ವಾರಸುದಾರರಿಗೆ ಮೊಬೈಲ್’ಗಳನ್ನು ಮರಕಳಿಸಲಾಯಿತು. ಇದೇ ವೇಳೆ ವಿಜಯಪುರದಲ್ಲಿ ಠಾಣೆಯ

ಸಿಬ್ಬಂದಿಗಳೇ ಪಿ.ಎಸ್.ಐ ವಿರುದ್ಧ ಬರೆದ ಪತ್ರದ ಕುರಿತು ಮಾಧ್ಯಮಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಜಿಪಿ ಚೇತನ್’ಸಿಂಗ್ ರಾಥೋರ್ ಅವರು ಈ ಕುರಿತು ಪರಿಶೀಲಿಸಲಾಗುವುದು ಎಂದರು.
