BELAGAVI

ಕಮಲ್ ಬಸದಿಯಲ್ಲಿ ಧರ್ಮಚಕ್ರ ಆರಾಧನಾ ಮಹೋತ್ಸವ ಸಮಾರೋಪ

Share

ಸಾವಿರಾರು ವರ್ಷದ ಹಿಂದೆ ತೀರ್ಥಂಕರರು ನೀಡಿದ ಶಾಂತಿ ಅಹಿಂಸೆಯ ಸಂದೇಶವನ್ನು ಪಾಲಿಸುತ್ತ ಜೈನ ಧರ್ಮವು ಎಲ್ಲರಿಗೂ ಮಾದರಿಯಾಗಿದೆ. ಜೈನ ಧರ್ಮದ ತತ್ವಾದರ್ಶಗಳನ್ನು ಪಾಲಿಸಿದರೇ, ಕಾನೂನು ಸುವ್ಯವಸ್ಥೆಗೆ ಎಂದಿಗೂ ಧಕ್ಕೆ ಬರುವುದಿಲ್ಲವೆಂದು ಬೆಳಗಾವಿ ಎಸ್ಪಿ. ಕೆ. ರಾಮರಾಜನ್ ಅಭಿಪ್ರಾಯಪಟ್ಟರು.

ಆಚಾರ್ಯ ಶ್ರೀ ಧರ್ಮಸೇನ ಮುನಿಗಳ ಸಾನಿಧ್ಯದಲ್ಲಿ ಬೆಳಗಾವಿಯ ಐತಿಹಾಸಿಕ ಕಮಲ್ ಬಸದಿಯಲ್ಲಿ ನಡೆಯುತ್ತಿರುವ ಧರ್ಮಚಕ್ರ ಆರಾಧನಾ ಮಹೋತ್ಸವವು ಇಂದು ಸಮಾರೋಪಗೊಂಡಿತು. ಕಾರ್ಯಕ್ರಮದ ರೂವಾರಿಗಳಾದ ಸುನೀಲ್ ಹಣುಮಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಳಶಾಭಿಷೇಕ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ, ಬೆಳಗಾವಿ ದಂಡು ಮಂಡಳಿಯ ಮುಖ್ಯ ನಿರ್ವಾಹಕ ಅಧಿಕಾರಿಗಳಾದ ಮಚಲವಾರ ಸುದಾಮ್ ಹರಿವಿಜಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್, ಉದ್ಯಮಿಗಳಾದ ಪಿ.ಪಿ.ದೊಡ್ಡಣ್ಣವರ, ಗೋಪಾಲ ಜಿನಗೌಡ, ಅಪ್ಪಾಸಾಹೇಬ ಕಲಮನಿ, ಧನ್ಯಕುಮಾರ ಕಸ್ತೂರಿ, ಪದ್ಮಶ್ರೀ ಹನಮಣ್ಣವರ, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಹೀರಾಚಂದ ಕಲಮನಿ, ಕುಂತಿನಾಥ ಕಲಮನಿ , ಪದ್ಮರಾಜ ವೈಜನ್ನವರ, ಅಭಯ್ ಅವಲಕ್ಕಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಧರ್ಮಚಕ್ರ ಆರಾಧನಾ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿರುವ ಸುನೀಲ್ ಹಣುಮಣ್ಣನವರ ಮತ್ತು ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು.

ಬೆಳಗಾವಿ ದಂಡು ಮಂಡಳಿಯ ಮುಖ್ಯ ನಿರ್ವಾಹಕ ಅಧಿಕಾರಿಗಳಾದ ಮಚಲವಾರ ಸುದಾಮ್ ಹರಿವಿಜಯ್ ಅವರು ಕಮಲ ಬಸದಿಯೂ ಐತಿಹಾಸಿಕ ವಾಸ್ತುಶಿಲ್ಪವಾಗಿದ್ದು, ತೀರ್ಥಂಕರರು ನೀಡಿದ ಸಂದೇಶವನ್ನು ಸದಾ ನೆನಪಿಸುತ್ತ, ಅವುಗಳನ್ನು ಪಾಲಿಸಲು ಪ್ರೇರಣಾದಾಯಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಅವರು ಧರ್ಮಚಕ್ರ ಆರಾಧನಾ ಮಹೋತ್ಸವವದಲ್ಲಿ ಭಾಗಿಯಾಗಿ ಶಾಂತಿಯುತ ಅನುಭವ ಉಂಟಾಗಿದೆ. ಜೈನ ಸಮುದಾಯವು 2000 ಸಾವಿರ ವರ್ಷದ ಹಿಂದೆಯೇ ಸೌಹಾರ್ದತೆ ಮತ್ತು ಭವಿಷ್ಯವನ್ನು ಶಾಂತಿಪೂರ್ಣವಾಗಿ ನಡೆಸುಕೊಂಡು ಹೋಗುವ ಸಂದೇಶವನ್ನು ನೀಡಿದೆ. ಜೈನ ಸಮಾಜವು ಶಿಸ್ತು ಮತ್ತು ಶಾಂತಿಯ ಸಂದೇಶವನ್ನು ತೀರ್ಥಂಕರರು ನೀಡಿದ್ದಾರೆ. ಜೈನ ಸಮುದಾಯ ಎಲ್ಲರಿಗೂ ಮಾದರಿ. ಜೈನ ಧರ್ಮದ ತತ್ವಾದರ್ಶಗಳನ್ನು ಪಾಲಿಸಿದರೇ, ಕಾನೂನು ಸುವ್ಯವಸ್ಥೆಗೆ ಎಂದಿಗೂ ಧಕ್ಕೆ ಬರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಹೋತ್ಸವದ ಯಶಸ್ವಿಗೆ ಶ್ರಮಿಸಿದವರನ್ನು ಗಣ್ಯರು ಸತ್ಕರಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಸಮಾಜ ಬಾಂಧವರು ಭಾಗಿಯಾಗಿದ್ಧರು.

Tags:

error: Content is protected !!