Belagavi

ವಡಗಾಂವನಲ್ಲಿ ಬಸವಣ್ಣನ ಜನ್ಮೋತ್ಸವ ಸಂಭ್ರಮ: ವಝೇ ಗಲ್ಲಿಯಲ್ಲಿ ಹರಿದುಬಂದ ಭಕ್ತ ಸಾಗರ, ಮಹಾಪ್ರಸಾದ ಯಶಸ್ವಿ!

Share

• ವಡಗಾಂವನ ವಝೇ ಗಲ್ಲಿಯಲ್ಲಿ ಬಸವ ಜಯಂತಿ ಸಂಭ್ರಮ
• ಭಕ್ತರಿಂದ ಇಂದು ಭವ್ಯ ತೊಟ್ಟಿಲೋತ್ಸವ ಆಚರಣೆ
• ಮಧ್ಯಾಹ್ನ ನಡೆದ ಅದ್ದೂರಿ ಮಹಾಪ್ರಸಾದ ಸೇವೆ
• ನಾಳೆ ಪುಟ್ಟ ಮಕ್ಕಳಿಂದ ವಚನ ವೈಭವ!

ಬೆಳಗಾವಿಯ ವಡಗಾಂವನ ವಝೇ ಗಲ್ಲಿಯಲ್ಲಿ ಇಂದು ಬಸವ ಜಯಂತಿಯ ಸಡಗರ ಮುಗಿಲು ಮುಟ್ಟಿದೆ. ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಮಹಾಪ್ರಸಾದ ಸೇವೆ ಹಾಗೂ ತೊಟ್ಟಿಲೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಬೆಳಗಾವಿ ವಡಗಾಂವನ ವಝೇ ಗಲ್ಲಿಯ ಬಸವೇಶ್ವರ ಯುವಕ ಸಂಘದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಪ್ರಯುಕ್ತ ಶನಿವಾರದಂದು ಶ್ರೀ ವೀರಭದ್ರದೇವರ ಸಾಮೂಹಿಕ ಗುಗ್ಗಳೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಝೇ ಬೀದಿಯಿಂದ ಆರಂಭವಾದ ಬಸವೇಶ್ವರ ಮೂರ್ತಿಯ ಭವ್ಯ ಮೆರವಣಿಗೆಯು ಬಝಾರ ಗಲ್ಲಿ ಹಾಗೂ ಚಾವಡಿ ಗಲ್ಲಿಯ ಮೂಲಕ ಸಾಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಇಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಶ್ರದ್ಧಾ ಭಕ್ತಿಯಿಂದ ಬಸವಣ್ಣನವರ ಜನ್ಮೋತ್ಸವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ಸೇರಿದ ನೂರಾರು ಭಕ್ತರು ವಚನ ಗಾಯನದೊಂದಿಗೆ ಬಸವಣ್ಣನವರ ಸ್ಮರಣೆ ಮಾಡಿದರು.
ಬಸವ ಜಯಂತಿಯ ವಿಶೇಷ ಅಂಗವಾಗಿ ಇಂದು ಮಧ್ಯಾಹ್ನ ಬೃಹತ್ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಡಗಾಂವ ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳು ಬಸವಣ್ಣನವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ನಾಳೆ ಸೋಮವಾರ ಸಂಜೆ 6 ಗಂಟೆಗೆ ಸಣ್ಣ ಮಕ್ಕಳಿಂದ ಬಸವೇಶ್ವರ ವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10 ಗಂಟೆಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಗುವುದು. ಬಸವೇಶ್ವರ ಯುವಕ ಸಂಘದ ಸರ್ವ ಸದಸ್ಯರಾದ ರವೀಂದ್ರ ಮಳ್ಳಿ, ರವಿ ಯಳ್ಳೂರ, ಶಶಿಧರ ಕಲ್ಲೇದ್, ಗುರುಪಾದ ಹೊರಕೇರಿ ಸೇರಿದಂತೆ ಗುರು-ಹಿರಿಯರು ಈ ಸಮಾರಂಭವನ್ನು ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಗೊಳಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ಸಂದೇಶ ಸಾರಿದರು.

Tags:

error: Content is protected !!