Belagavi

ಬೆಳಗಾವಿ: ಕೋರ್ಟ್ ಆವರಣದಲ್ಲೇ ರೌಡಿಶೀಟರ್ ಅಟ್ಟಹಾಸ; ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ನಿಂದನೆ!

Share

ಬೆಳಗಾವಿಯಲ್ಲಿ ರೌಡಿಶೀಟರ್ ಲಕ್ಷ್ಮಣ ದಡ್ಡಿ ಅಟ್ಟಹಾಸ

ಕರ್ತವ್ಯ ನಿರತ ಪತ್ರಕರ್ತರ ಮೇಲೆ ಗೂಂಡಾಗಿರಿ

ಕೋರ್ಟ್ ಆವರಣದಲ್ಲೇ ಮಾಧ್ಯಮದವರಿಗೆ ಅವಾಚ್ಯ ನಿಂದನೆ

ಪೊಲೀಸರ ಮುಂದೆಯೇ ರೌಡಿಗಳ ರಾಕ್ಷಸೀ ಪ್ರವೃತ್ತಿ

ಬೆಳಗಾವಿಯಲ್ಲಿ ರೌಡಿಶೀಟರ್‌ಗಳ ಪುಂಡಾಟಿಕೆ ಮಿತಿಮೀರಿದೆ. ಶಹಬಾಜ್ ಪಠಾಣ್ ಕೊಲೆ ಪ್ರಕರಣದ ವಿಚಾರಣೆಗೆ ಬಂದಿದ್ದ ರೌಡಿಶೀಟರ್‌ಗಳು, ನ್ಯಾಯಾಲಯದ ಆವರಣದಲ್ಲೇ ಕರ್ತವ್ಯ ನಿರತ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬುಧವಾರ ನಡೆದಿದೆ.

ಶಹಬಾಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಬಂಧಿಸಿದಂತೆ ಬೆಳಗಾವಿ ಎರಡನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಶಿಕ್ಷೆ ಪ್ರಕಟಿಸುವ ಬಾಕಿ ಉಳಿದು ಹಿಂಡಲಗಾ ಜೈಲಿಗೆ ರವಾನೆ ಮಾಡುವ ಮಾಧ್ಯಮದವರ ಮೇಲೆ ರೌಡಿ ಶೀಟರ್ ಲಕ್ಷ್ಮಣ ದಡ್ಡಿ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ಬುಧವಾರ ನಡೆದಿದೆ.
ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ, ಬಸವಣ್ಣಿ ನಾಯಕ ಮಾಳಮಾರುತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಿ ಮರಳಿ ಜೈಲಿಗೆ ಕರುಳಿಸುವಾಗ ಈ ಘಟನೆ ನಡೆದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!