Belagavi

ಮಹಾಪಾಲಿಕೆ ಎದುರು ತಮಟೆ ಬಾರಿಸಿ ನಗರ ಸೇವಕ ನಾಶಿಪುಡಿ ವಿನೂತನ ಪ್ರತಿಭಟನೆ ಸಿಂಗಲ್ ಟ್ಯಾಕ್ಸ್ ಜಾರಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Share

ಬಡವರ ಮೇಲೆ ‘ಡಬಲ್ ಟ್ಯಾಕ್ಸ್’ ಹೊರೆ

ಅಧಿಕಾರಿಗಳ ವಿರುದ್ಧ ನಾಶಿಪುಡಿ ಆಕ್ರೋಶ

ಸರ್ಕಾರದ ನಿಯಮ ಗಾಳಿಗೆ ತೂರಿರುವುದಾಗಿ ಆರೋಪ

ತಮಟೆ ಬಾರಿಸಿ ಅಧಿಕಾರಿಗಳಿಗೆ ಎಚ್ಚರಿಕೆ

ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಬಡ ಜನರಿಂದ ಸಿಂಗಲ್ ಟ್ಯಾಕ್ಸ್ ವಸೂಲಿ ಮಾಡುವ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ನಗರೆಸೇವಕ ದಿನೇಶ್ ನಾಶಿಪುಡಿ ಅವರು ತಮಟೆ ಭಾರಿಸುತ್ತ ವಿನೂತನ ಪ್ರತಿಭಟನೆ ನಡೆಸಿದರು.

ಕಟ್ಟಡ ಅನುಮತಿ ಇಲ್ಲದೆ ಮನೆಗಳನ್ನು ನಿರ್ಮಿಸಿಕೊಂಡ ಬಡವರ ಬಳಿ ಕೇವಲ ಒಂದು ಬಾರಿ ಡಬಲ್ ಟ್ಯಾಕ್ಸ್ ಪಡೆದು ನಂತರ ಪ್ರತಿ ವರ್ಷ ಸಿಂಗಲ್ ಟ್ಯಾಕ್ಸ್ ಪಡೆಯುವಂತೆ ಸರ್ಕಾರದ ಆದೇಶವಿದ್ದರೂ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಅದನ್ನ ಗಾಳಿಗೆ ತೂರಿ ಪ್ರತಿ ವರ್ಷವೂ ಡಬಲ್ ಟ್ಯಾಕ್ಸ್ ವಸೂಲಿ ಮಾಡುತ್ತಿದ್ದು ಇದು ಬಡವರ ಮೇಲೆ ಹೊರೆಯಾಗಿದೆ. ಇದನ್ನ ಖಂಡಿಸಿ ನಾಮ ನಿರ್ದೇಶಕ ನಗರಸೇವಕ ದಿನೇಶ್ ನಾಶಪುಡಿ ಅವರು ಈ ಹಿಂದೆಯೂ ಪಾಲಿಕೆಯಲ್ಲಿ ಹಾಗೂ ಆಯುಕ್ತರ ಕೊಠಡಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ನೀಡಿದ ಗಡುವು ಮುಗಿದರು ನಿಯಮ ಜಾರಿಯಾಗದ ಹಿನ್ನೆಲೆ ಇಂದು ಮಹಾನಗರ ಪಾಲಿಕೆ ಎದುರು ತಮಟೆ ಭಾರಿಸುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಸರ್ಕಾರದ ಆದೇಶ ಪಾಲಿಸದ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಸಿಂಗಲ್ ಟ್ಯಾಗ್ಸ್ ನೀತಿ ಜಾರಿಗೆ ಆಗೋವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ದಿನೇಶ್ ನಾಶಿಪುಡಿ ಪಟ್ಟು ಹಿಡಿದರು.

ಸ್ಥಳಕ್ಕೆ ನಗರ ಸೇವಕರು ಹಾಗೂ ಶಾಸಕರು ಮನವೊಲಿಕೆ ಮಾಡಿ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ ಬಳಿಕ ಅವರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು.

Tags:

error: Content is protected !!