Belagavi

ದಕ್ಷಿಣ ಕಾಶಿಯಲ್ಲಿ ಆಮ್ರಪಲದ ವೈಭವ: ಕಪಿಲೇಶ್ವರನಿಗೆ ಆಕರ್ಷಕ ಹಾಪೂಸ್ ಅಲಂಕಾರ!

Share

• ದಕ್ಷಿಣ ಕಾಶಿ ಕಪಿಲೇಶ್ವರನಲ್ಲಿ ಅಕ್ಷಯ ತೃತೀಯ ಸಂಭ್ರಮ
• ರುದ್ರಾಭಿಷೇಕದೊಂದಿಗೆ ಶಿವಜಯಂತಿ ಮತ್ತು ಪರಶುರಾಮ ಜಯಂತಿ
• ಹಾಪೂಸ್ ಮಾವಿನ ಹಣ್ಣಿನಿಂದ ಆಕರ್ಷಕ ಅಲಂಕಾರ ಸೇವೆ
• ಟ್ರಸ್ಟಿಗಳು ಹಾಗೂ ಭಕ್ತರಿಂದ ವಿಶೇಷ ಪೂಜೆ ಸಲ್ಲಿಕೆ

ಬೆಳಗಾವಿಯ ಶ್ರೀಕ್ಷೇತ್ರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಪಿಲೇಶ್ವರ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಹಾಗೂ ಶಿವಜಯಂತಿ ಸಂಭ್ರಮ ಮನೆಮಾಡಿದೆ. ಈ ಪವಿತ್ರ ದಿನದಂದು ಕಪಿಲೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಮಾರುಕಟ್ಟೆಯ ಹೆಸರಾಂತ ವ್ಯಾಪಾರಿಗಳಿಂದ ಅರ್ಪಿಸಲ್ಪಟ್ಟ ನೂರಾರು ಹಾಪೂಸ್ ಮಾವಿನ ಹಣ್ಣುಗಳ ವಿಶಿಷ್ಟ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಅಕ್ಷಯ ತೃತೀಯ, ಶಿವಜಯಂತಿ ಹಾಗೂ ಪರಶುರಾಮ ಜಯಂತಿಯ ತ್ರಿವೇಣಿ ಸಂಗಮದ ಅಂಗವಾಗಿ ಅದ್ದೂರಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ಫ್ರೂಟ್ ಮಾರ್ಕೆಟ್‌ನ ಪ್ರಸಿದ್ಧ ವ್ಯಾಪಾರಿ ತುಷಾರ ಬರ್ಡೆ ಅವರು ನೀಡಿದ ಅತ್ಯುತ್ತಮ ಗುಣಮಟ್ಟದ ಹಾಪೂಸ್ ಮಾವಿನ ಹಣ್ಣುಗಳಿಂದ ಗರ್ಭಗುಡಿಯಲ್ಲಿ ಆಕರ್ಷಕವಾಗಿ ‘ಆಮ್ರ ಆರಾಧನೆ’ ಅಲಂಕಾರ ಮಾಡಲಾಗಿತ್ತು. ಪರಶುರಾಮ ಜಯಂತಿ ಮತ್ತು ಶಿವಜಯಂತಿ ಪ್ರಯುಕ್ತ ದೇವರಿಗೆ ವಿಶೇಷ ರುದ್ರಾಭಿಷೇಕ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಯಿತು. ಈ ಮಂಗಳಕರ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿಗಳು ಮತ್ತು ಸಮರ್ಪಿತ ಸೇವಕರು ಉಪಸ್ಥಿತರಿದ್ದು, ಭಕ್ತಿಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!