• ಡಾ. ಗುರುದೇವಿ ಅವರಿಗೆ ‘ಧಾರಿಣಿ’ ಪ್ರಶಸ್ತಿ
• ಅಕ್ಕನ ವಚನಗಳ ಆದರ್ಶದ ಹಾದಿ ಮುಖ್ಯ
• ರುದ್ರಾಕ್ಷಿ ಮಠದಲ್ಲಿ ಅಕ್ಕಮಹಾದೇವಿ ಜಯಂತಿ ಉತ್ಸವ
• ಬೆಳಗಾವಿಯ ಮಹಿಳಾ ಸಂಘಟನೆಗಳಿಂದ ವಚನ ಗಾಯನ

ಬೆಳಗಾವಿಯ ಶಿವಬಸವ ನಗರದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಉತ್ಸವ ಹಾಗೂ ‘ಧಾರಿಣಿ’ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು. ಈ ವೇಳೆ ಮಾತನಾಡಿದ ಖ್ಯಾತ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಅವರು, ಅಕ್ಕನ ವಚನಗಳ ಜೀವನ ಪ್ರೀತಿ ಹಾಗೂ ಆಧುನಿಕ ಮಹಿಳೆಯರ ಜೀವನ ಶೈಲಿಯ ಬಗ್ಗೆ ಅದ್ಭುತ ಉಪನ್ಯಾಸ ನೀಡಿದರು.
ಶ್ರೀ ರುದ್ರಾಕ್ಷಿ ಮಠ ನಾಗನೂರು ಹಾಗೂ ‘ಧಾರಿಣಿ’ ಗಡಿ ನುಡಿ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀದೇವಿ ನರಗುಂದ ಹಾಗೂ ಜಯಶೀಲಾ ಬ್ಯಾಕೋಡ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಮಾಜಿ ಮಹಾಪೌರರಾದ ವೀಣಾ ಕವಟಿಗಿಮಠ ಅವರು ವಚನಾಂಜಲಿಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ‘ಧಾರಿಣಿ’ ಪ್ರಶಸ್ತಿ ಸ್ವೀಕರಿಸಿದ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, “ಇರುವುದೆಲ್ಲವ ಬಿಟ್ಟು ಇರುವುದರೆಡೆಗೆ ನಡೆಯುವುದೇ ಜೀವನ. ಅಕ್ಕಮಹಾದೇವಿಯವರ ವಚನಗಳು ನಮಗೆ ಆದರ್ಶವಾಗಬೇಕು, ಆದರೆ ಅವುಗಳನ್ನು ಅನುಸರಿಸುವುದು ಸುಲಭದ ಮಾತಲ್ಲ” ಎನ್ನುತ್ತಾ ಶರಣೆಯರ ಆದರ್ಶಗಳನ್ನು ನೆನಪಿಸಿದರು. ಬೈಟ್
ಕಾರ್ಯಕ್ರಮದಲ್ಲಿ ಶೈಲಜಾ ಭಿಂಗೆ, ರತ್ನಪ್ರಭಾ ಬೆಲ್ಲದ, ಹೀರಾ ಚೌಗಲೆ, ಮಹಾದೇವಿ ಅಜವಾನ, ಸುರೇಖಾ ಮಾನ್ವಿ ಹಾಗೂ ಲಲಿತಾ ಪರ್ವತರಾವ್ ಉಪಸ್ಥಿತರಿದ್ದರು. ಪ್ರಭುದೇವ್ ಮಾತೃ ಮಂಡಳಿ, ಲಿಂಗಾಯತ್ ಮಹಿಳಾ ಸಮಾಜ, ಅಕ್ಕನ ಬಳಗ ಸೇರಿದಂತೆ ಬೆಳಗಾವಿಯ ವಿವಿಧ ಪ್ರಮುಖ ಸಂಘಟನೆಗಳು ಮತ್ತು ಸಾಹಿತ್ಯಾಸಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
