
ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹನುಮಂತ ಕನಮಡಿ ಎಂಬುವರ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ದಲ್ಲಿ ಎರಡು ದಿನಗಳ ಹಿಂದೆ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಇಂದು ಸರ್ವಿಸ್ ಸೆಂಟರ್ ಗೆ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ಅವಘಡ ದಲ್ಲಿ ದುರಸ್ತಿಗಾಗಿ ಬಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಲಾಗಿವೆ. ಸೆಂಟರ್ ದಲ್ಲಿದ್ದ ಲಕ್ಷಾಂತರ ಮೌಲ್ಯದ ಬಿಡಿ ಭಾಗಗಳು ಕೂಡ ಬೆಂಕಿಗಾಹುತಿ ಆಗಿವೆ. ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮಾನವೀಯತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಈ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೂ ಮಾತನಾಡುವೆ. ನಾನೂ ಕೂಡ ವೈಯಕ್ತಿಕವಾಗಿ ರೂ.5 ಲಕ್ಷ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು. ಅಗ್ನಿಸೂಕ್ಷ್ಮ ಮಳಿಗೆಗಳಲ್ಲಿ ಮಾಲೀಕರು/ಆಡಳಿತ ಮಂಡಳಿ ಅವಘಡ ಆಗದಂತೆ, ಒಂದು ವೇಳೆ ಆದರೂ ಅಗ್ನಿ ನಂದಿಸಲು ಉಪಕರಣವನ್ನು ಅಳವಡಿಸಿಕೊಂಡಿರಬೇಕು ಎಂದು ಸಲಹೆ ನೀಡಿದರು.


