:::ಆ ವಿಧಾನಸಭಾ ಕ್ಷೇತ್ರದ ಶಾಸಕನ ಅಕಾಲಿಕ ನಿಧನದಿಂದ ಇನ್ನೇನು ಕೆಲ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ.ಈಗಿಂದಲೇ ಬಿಜೆಪಿ ಕಾಂಗ್ರೆಸ್ ನಲ್ಲಿ ಉಪಚುನಾವಣೆ ಪೂರ್ವಸಿದ್ದತೆ ಸಭೆಗಳು ನಡೆಯುತ್ತಿವೆ.ಇದರ ನಡುವೆ ಕಾಂಗ್ರೆಸ್ ಟಿಕೆಟ್ ಗಾಗಿ ಅಕಾಲಿಕ ನಿಧನಹೊಂದಿದ ಶಾಸಕನ ಕುಟುಂಬದಲ್ಲೇ ಟಿಕೆಟ್ ಫೈಟ್ ಶುರುವಾಗಿದೆ.ಬಾಗಲಕೋಟೆ ಮತಕ್ಷೇತ್ರದ ಬೈ ಇಲೆಕ್ಷನ್ ಘೋಷಣೆಗೂ ಮುನ್ನ ಶಾಸಕ ದಿ.ಮೇಟಿ ನಾಲ್ವರ ಮಕ್ಕಳ ನಡುವೆ ಟಿಕೆಟ್ ರಂಪಾಟ ಶುರುವಾಗಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಒಂದೆಡೆ ಶಾಸಕ ದಿ.ಎಚ್ ವೈ ಮೇಟಿ ಅವರ ನಿಧನದಿಂದ ತೆರುವಾದ ಕ್ಷೇತ್ರ.ಮತ್ತೊಂದೆಡೆ ಬೈ ಇಲೆಕ್ಷನ್ ಘೋಷಣೆಗೂ ಮುನ್ನ ಶಾಸಕ.ದಿವಂಗತ ಎಚ್ ವೈ ಮೇಟಿ ಮಕ್ಕಳ ಬೆಂಬಲಿಗರಿಂದ ಸೋಶಿಯಲ್ ಮಿಡಿಯಾದಲ್ಲಿ ಮುಂದುವರೆದ ಟಿಕೆಟ್ ವಾರ್.ಇನ್ನೊಂದೆಡೆ ದಿ.ಎಚ್ ವೈ ಮೇಟಿ ನಿಧನ ಬಳಿಕ ಅವ್ರ ನಾಲ್ಕು ಮಕ್ಕಳ ಬೆಂಬಲಿಗರ ಪರವಾಗಿ ಪೋಸ್ಟ್ ಹಾಕ್ತಿದ್ದವರ ಮತ್ತು ಮೇಟಿ ಮಕ್ಕಳ ವಿರುದ್ಧ ಗರಂ ಆದ ಕಾಂಗ್ರೆಸ್ ಜಿಲ್ಲಾದ್ಯಕ್ಷ.ಇಂತಹ ಬೆಳವಣಿಗೆಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ವಿಧಾನಸಭಾ ಕ್ಷೇತ್ರ.ಹೌದು ದಿವಂಗತ ಹೆಚ್ ವೈ ಮೇಟಿ ನಿಧನದ ನಂತರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು,ಮೇಟಿ ಮಕ್ಕಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್ ಆಕಾಂಕ್ಷಿ ಎಂದು ಪೋಷ್ಟ್ ಗಳ ಹಾರಾಟ ಜೋರಾಗಿದೆ. ದಿವಂಗತ ಶಾಸಕ ಮೇಟಿ ಅವರ ಕೊನೆಯ ಪುತ್ರಿ ಮಹಾದೇವಿ ಮೇಟಿ. ಇಷ್ಟು ದಿನ ಮೇಟಿ ಅವರು ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಮೇಟಿ ಅವರ ನಾಲ್ಕು ಜನ ಮಕ್ಕಳಲ್ಲಿ, ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಹಾಗೂ ಬಾಯಕ್ಕ ಮೇಟಿ ಈ ಮೂವರು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಅವರವರ ಅಭಿಮಾನಿಗಳು ಬಾಗಲಕೋಟೆ ಬಾವಿ ಶಾಸಕರು ಎಂದು ಪೋಸ್ಟ್ ಹಾಕಿ ವೈರಲ್ ಕೂಡ ಮಾಡುತ್ತಿದ್ದಾರೆ.ಆದರೆ ಈಗ ಇಷ್ಟು ದಿನ ತೆರೆಯಲ್ಲಿದ್ದ ನಾಲ್ಕನೇ ಸುಪುತ್ರಿ ಮಹಾದೇವಿ ಮೇಟಿ ಕೂಡ ತಾನೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ತಮ್ಮದೇ ಬೆಂಬಲಿಗರ ಗುಂಪಿನೊಂದಿಗೆ ಚುನಾವಣಾ ಅಖಾಡವನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ನಮ್ಮ ತಂದೆಯವರ ಅಭಿಮಾನಿಗಳ ಒತ್ತಾಯದ ಮೇರೆಗೆ ,ಜನರಿಗೆ ನ್ಯಾಯ ದೊರಕಿಸಲು ಅಖಾಡಕ್ಕೆ ಇಳಿಯುತ್ತಿರುವುದಾಗಿ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ ಮೇಟಿ ಮಗಳು ಮಹಾದೇವಿ.ಮೇಟಿ ಮಕ್ಕಳ ನಡಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂಜಯ್ಯನಮಠ್ ಗರಂ ಆಗಿದ್ದಾರೆ..
ವೈ//ಓ:೨ ಇನ್ನು ಮಹಾದೇವಿ ಮೇಟಿ ಅವರ ಅಭಿಮಾನಿಗಳು ಸಿಎಂ ಸಿದ್ಧರಾಮಯ್ಯನವರ ಹಾಗೂ ದಿವಂಗತ ಮೇಟಿ ಅವರ ಪರಮಾಪ್ತ ಹೊಳೆಬಸು ಶೆಟ್ಟರ್ ವಿರುದ್ಧ ಇನ್ನು ಸಾಮಾಜಿಕ ಜಾಲಾತಾಣದಲ್ಲಿ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ. ಬಾಗಲಕೋಟೆ ಮತಕ್ಷೇತ್ರದ ಆಡಳಿತ ಬಾಗಲಕೋಟೆಯಿಂದಲೇ ಹೊರತು ಗುಳೇದಗುಡ್ಡದಿಂದಲ್ಲ ಎಂಬ ಸಂದೇಶಗಳು, ಬ್ಯಾನರ್ ಗಳು ಹರಿದಾಡುತ್ತಿವೆ.ಈ ಎಲ್ಲ ಬೆಳವಣಿಗೆಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ್ ಗರಂ ಆಗಿದ್ದು,ಮೇಟಿ ಕುಟಬದ ವಿರುದ್ಧ ಕ್ರಮ ವಹಿಸುವ ಎಚ್ಚರಿಕೆ ನೀಡಿದ್ದಾರೆ.ತಂದೆ ನಿಧನ ಅನುಕಂಪದ ಲಾಭ ಪಡೆಯುವುದು ಬಿಟ್ಟು,ಉಪಚುನಾವಣೆ ಹೊಸ್ತಿಲಲ್ಲಿ ಮೇಟಿ ಮಕ್ಕಳು ಟಿಕೆಟ್ ಗಾಗಿ ಬೆಂಬಲಿಗರ ಮೂಲಕ ಆಶೆ ಅಭಿವ್ಯಕ್ತ ಪಡಿಸುವುದು ಸರಿಯಲ್ಲ.ಇದು ಹಿಂಗೆ ಮುಂದುವರೆದಿದೆ ಜಿಲ್ಲಾಧ್ಯಕ್ಷನಾಗಿ ಕ್ರಮ ಕೈಗೊಳ್ಳುತ್ತೇನೆ ಎಂದ್ರು ಜಿಲ್ಲಾಧ್ಯಕ್ಷ ನಂಜಯ್ಯನಮಠ್..
ಒಟ್ಟಿನಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲೀಗ ಉಪಚುನಾವಣೆಯ ಕಾವು ಜೋರಾಗ್ತಿದೆ.ಅದರಲ್ಲೂ ಕಾಂಗ್ರೆಸ್ ನಲ್ಲಿ ಮಕ್ಕಳಲ್ಲೇ ಟಿಕೆಟ್ ಫೈಟ್ ಎದುರಾಗಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮನೆ ಮಾಡಿದ್ದಂತೂ ಸುಳ್ಳಲ್ಲ…
