Kagawad

ಕಾಗವಾಡ ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Share

ಕಾಗವಾಡ ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದ ಗಾಂಧಿ ಗ್ರಾಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಸೋಮವಾರ ದಿನಾಂಕ ಒಂದ ರಂದು ಬೆಂಗಳೂರಿನ ವಿಧಾನಸಭೆಯ ಕಂಠೀರವ ಸಭಾಭವನದಲ್ಲಿ ರಾಜ್ಯ ಸರ್ಕಾರ ನೀಡಿರುವ ಶ್ರೀ ಗಾಂಧಿ ಗ್ರಾಮ ಪ್ರಶಸ್ತಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ಪಂಚಾಯತಿ ರಾಜ್ಯ ಅಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಇವರು ಜುಗುಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಾಕಾಸಾಹೇಬ ಪಾಟೀಲ್, ಉಪಾಧ್ಯಕ್ಷ ಶ್ರೀಮತಿ. ನೀತಾ ಮಹಾದೇವ ಕಾಂಬಳೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಿಲ್ಪಾ ನಾಯ್ಕೋಡಿ ಇವರಿಗೆ ಪ್ರಶಸ್ತಿ ಹಾಗೂ ೫ ಲಕ್ಷ ಅಭಿವೃದ್ಧಿ ಧನಾದೇಶ ಬಹುಮಾನ ನೀಡಿ ಗೌರವಿಸಿದರು.
ಜುಗುಳ ಗ್ರಾಮ ಪಂಚಾಯಿತಿಗೆ ಪ್ರಪ್ರಥಮ ರಾಜ್ಯ ಸರ್ಕಾರದ ಗಾಂಧಿ ಗ್ರಾಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಪ್ರಶಸ್ತಿ ಸ್ವೀಕರಿಸಿ ಮರಳಿ ಗ್ರಾಮಕ್ಕೆ ಬಂದಾಗ ಎಲ್ಲ ಸದಸ್ಯರು, ಗ್ರಾಮದ ಗ್ರಾಮಸ್ಥರು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಗೌರವಿಸಿ ಅಭಿನಂದಿಸಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಾಕಾಸಾಹೇಬ ಪಾಟೀಲ್ ಮಾತನಾಡಿ, ಪಂಚಾಯಿತಿಗೆ ದೊರೆತಿದೆ ಪ್ರಥಮ ಪ್ರಶಸ್ತಿ, ನಾನು ಕಳೆದ ಎರಡು ವರಿ ವರ್ಷಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ನಮ್ಮ ಶಾಸಕ ರಾಜು ಕಾಗೆ ವಿಶೇಷವಾಗಿ ಅನುದಾನ ನೀಡಿದ್ದು ಅದರೊಂದಿಗೆ ಪಂಚಾಯಿತಿಯ ಅಭಿವೃದ್ಧಿ ಅನುದಾನ ತೆಗೆದುಕೊಂಡು ಗ್ರಾಮದಲ್ಲಿ ಸುಮಾರು ೧೫ ಕೋಟಿ ರೂಪಾಯಿ ವೆಚು ಮಾಡಿ ಕಾಮಗಾರಿ ಕೈಗೊಂಡಿದ್ದೇವೆ. ಅಲ್ಲದೆ ಗ್ರಾಮಕ್ಕೆ ದೇಶದ ಸ್ವಾತಂತ್ರ‍್ಯ ನಂತರ ಯಿವರೆಗೂನ ಎಲ್ಲ ಸಂಸದರು, ಶಾಸಕರು ಅನುದಾನ ನೀಡಿ ಸಹಕರಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಯ ಎಲ್ ಸದಸ್ಯರು, ಗ್ರಾಮದ ಹಿರಿಯರು ಸಹಕರಿಸಿದ ಬಗ್ಗೆ ಇವರಿಗೆ ಹಾಗೂ ರಾಜ್ಯದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರು, ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ಅನಾಸಾಹೇಬ್ ಪಾಟೀಲ್ ಮಾತನಾಡಿ, ಜುಗುಳ ಗ್ರಾಮದ ಅಭಿವೃದ್ಧಿಗಾಗಿ ಹಂತ ಹಂತವಾಗಿ ಎಲ್ಲ ಚುನಾಯಿತ ಸದಸ್ಯರು ಸಹಕರಿಸಿದ್ದಾರೆ. ಪ್ರಾರಂಭದಲ್ಲಿ ಜುಗುಳ ಗ್ರಾಮಕ್ಕೆ ಬರುವುದು ಅಷ್ಟೇನೂ ಸರಳ ಇರಲಿಲ್ಲ. ನದಿ ನೀರಿನ ಪ್ರವಾದರಬಸಕ್ಕೆ ರಸ್ತೆಗಳು ತತ್ತರಿಸಿತ್ತು. ಸಹಜವಾಗಿ ಕಾಲುನಡಿಗೆಯಿಂದ ಬರುವುದು ಕಷ್ಟವಿತ್ತು ಇದನ್ನು ಗಮನಿಸಿ ಶಿರಗುಪ್ಪಿ-ಜುಗುಳ ಮಧ್ಯದ ರಸ್ತೆ ಎತ್ತರಿಸಿ, ಸೇತುವೆ ನಿರ್ಮಿಸಿ, ರಸ್ತೆ ಅಭಿವೃದ್ಧಿಗೊಳಿಸಿದರು ಬಳಿಕ ಶಾಸಕ ರಾಜು ಕಾಗೆ ಇವರು ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಸಂಪೂರ್ಣ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಿದರು, ಈಗಲೂ ಹತ್ತಾರು ಕೋಟಿ ರೂಪಾಯಿ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಗ್ರಾಮದ ಅಭಿವೃದ್ಧಿಗಾಗಿ ಸಹಕರಿಸಿದ್ದಾರೆ, ಸಂಸದರಾದ ರಮೇಶ್ ಜಿಗಜಿನಗಿ, ಪ್ರಕಾಶ್ ಹುಕ್ಕೇರಿ, ರಮೇಶ್ ಕತ್ತಿ, ಅನ್ನಸಾಹೇಬ್ ಜೊಲ್ಲೆ, ಪ್ರಿಯಾಂಕಾ ಜಾರಕಿಹೊಳಿ, ಇವರು ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗಾಗಿ ಅನುದಾನ ನೀಡಿದ್ದರೆ. ಗ್ರಾಮದಲ್ಲಿ ಮನೆಗಳು ನಿರ್ಮಿಸಲು ಶಾಸಕ ರಾಜು ಕಾಗೆ ವಿಶೇಷವಾಗಿ ಸಹಕರಿಸಿದಾರೆ. ಈ ಅಭಿವೃದ್ಧಿ ಗಮನಿಸಿ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದಾರೆ. ತಾಲೂಕ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ವಿರಣ್ಣಾ ವಾಲಿ ಹಾಗೂ ಜಿಲ್ಲೆಯ ಇನ್ನುಳಿದ ಅಧಿಕಾರಿಗಳು ಮಾರ್ಗದರ್ಶನ ನೀಡಿ ಪ್ರಶಸ್ತಿ ನೀಡಲು ಸಹಕರಿಸಿದ್ದಾರೆ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಾಕಾಸಾಹೇಬ್ ಪಾಟೀಲ್, ಉಪಾಧ್ಯಕ್ಷ ಶ್ರೀಮತಿ. ನೀತಾ ಮಹಾದೇವ ಕಾಂಬಳೆ, ಸದಸ್ಯ ಉಮೇಶ್ ಪಾಟೀಲ್, ಬಾಬಾಸಾಹೇಬ್ ತಾರದಾಳಿ, ಅವಿನಾಶ್ ಪಾಟೀಲ್, ಆನಂದ ಕುಲಕರ್ಣಿ, ಉದಯ್ ದೇಸಾಯಿ, ಅಭಯ್ಯಚಂದ ಶಹಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ನಾಯ್ಕೋಡಿ ಸೇರದಂತೆ ಎಲ್ಲ ಸಿಬ್ಬಂದಿ ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

Tags:

error: Content is protected !!