ಖಾನಾಪೂರ ತಾಲೂಕಿನ ಸಮಾಜ ಸೇವಕಿ, ಖಾನಾಪೂರ ಬ್ಲಾಕ್ ಕಾಂಗ್ರೆಸ್ ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷೆ, ಬೀಡಿ ಗ್ರಾಮ ಪಂಚಾಯಿತಿ ಸದಸ್ಯೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಒಕ್ಕೂಟ ಸದಸ್ಯೆ ದೀಪಾ ಪಾಟೀಲ ಅವರನ್ನು ಬಸವಂತ ನಾಗೂ ಶಿಂಗಾಡೆ ಸಾಮಾಜಿಕ ಸೇವಾ ಭಾವಿ ಸಂಸ್ಥೆಯು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಫೀನಿಕ್ಸ್ ಗೋಬಲ ಅವಾರ್ಡ್ -2005, ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ ನೀಡಿ ಗೌರವಿಸಿತು ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರ ಪ್ರಮುಖ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಮತ್ತು ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು ಈ ಪ್ರಶಸ್ತಿ ಪಡೆದಿದ್ದಕ್ಕಾಗಿ ದೀಪಾ ಪಾಟೀಲ ಅವರನ್ನು ಎಲ್ಲರಿಂದಲೂ ಅಭಿನಂದನೆಗಳು ಸಲ್ಲಿಕೆಯಾಗುತ್ತಿವೆ.