ಅಂಕಗಳನ್ನು ಪಡೆದುಕೊಂಡು ಪ್ರಥಮವೆಂದು ಹೆಗ್ಗಳಿಕೆ ಪಡೆದ ಅನಹಾ ತಿಗಡಿಯನ್ನು ಖಾನಾಪೂರ ಯುವ ಕಾಂಗ್ರೆಸ್ ನಗರಾಧ್ಯಕ್ಷ ಅಧ್ಯಕ್ಷ ಇಸಾಕ್ ಖಾನ್ ಪಠಾಣ್ ಅವರು ಸತ್ಕರಿಸಿದರು.
ಖಾನಾಪೂರದ ಬಾಶಿಬಾನ್ ಹೈಸ್ಕೂಲಿನ ಉರ್ದು ಭಾಷೆಯ ವಿದ್ಯಾರ್ಥಿನಿ ಅನಹಾ ಫಯಾಜ್ ತಿಗಡಿ ಈ ವಿದ್ಯಾರ್ಥಿನಿಯು 625/613 ಅಂಕಗಳನ್ನು ಪಡೆದುಕೊಂಡು ಉರ್ದು ಶಾಲೆಗಳಲ್ಲಿ ಪ್ರಥಮವೆಂದು ಹೆಗ್ಗಳಿಕೆ ಪಡೆದ ಹಿನ್ನಲೆಯಲ್ಲಿ ಅವರನ್ನು ಖಾನಾಪೂರ ತಾಲೂಕಾ ಯುವ ಕಾಂಗ್ರೆಸ್ ನಗರಾಧ್ಯಕ್ಷ ಅಧ್ಯಕ್ಷ ಇಸಾಕ್ ಖಾನ್ ಪಠಾಣ್ ಅವರು ಆತ್ಮೀಯವಾಗಿ ಸತ್ಕರಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಸಾಕ್ ಖಾನ್ ಪಠಾಣ್ ಅವರು ಸಹೋದರಿ ಅನಹಾ ತಿಗಡಿ ಉರ್ದು ಶಾಲೆಗಳಲ್ಲಿ ಪ್ರಥಮವೆಂದು ಹೆಗ್ಗಳಿಕೆ ಪಡೆದ ಖಾನಾಪೂರಕ್ಕೆ ಒಳ್ಳೆಯ ಹೆಸರು ತಂದಿದ್ದು ಇದೊಂದು ಹೆಮ್ಮೆಯ ವಿಷಯ ಎಂದು ಹೇಳಿ ಇವಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಖಾನಾಪೂರ ಪಟ್ಟಣ ಪಂಚಾಯಿತಿ ಸದಸ್ಯೆ ಫಾತೀಮಾ ಬೇಪಾರಿ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.