ಚಿಕ್ಕೋಡಿ:ಕಳ್ಳತನಕ್ಕೆ ಯತ್ನಿಸುತ್ತಿದ್ದ ಮೂವರು ಮಹಿಳೆಯರನ್ನು ಸದಲಗಾ ಪೊಲೀಸರು ಬೋರಗಾಂವ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ನಿಪ್ಪಾಣಿಯ ಆರತಿ ರವೀಂದ್ರ ಲೋಂಡೆ (35), ಮಹಾರಾಷ್ಟ್ರದ ಹಾತಕನಗಲೆಯ ನಗೀನಾ ಸಾಗರ ಚೌಗುಲೆ (40), ಕಾಗವಾಡದ ಸಾವಿತ್ರಿ ಲೋಂಡೆ (45) ಬಂಧಿತರು. ಬಸ್ ನಿಲ್ದಾ ಣದಲ್ಲಿ ಮಹಿಳೆಯರ ಮೊಬೈಲ್, ಪರ್ಸ್ ಕಳ್ಳತನ ಮಾಡಿದ್ದಾರೆ.
ಈ ವೇಳೆ ಕಳ್ಳತನಕ್ಕೆ ಒಳಗಾದ ಮಹಿಳೆಯರು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸದಲಗಾ ಪೊಲೀಸರು ಕಳ್ಳತನ ಮಾಡಿದ್ದ ಮಹಿಳೆಯರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತನಿಖೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ ಬಿರಾದಾರ, ಸಂತೋಷ ಬಡೋದೆ, ಕ್ರಾಂತಿ ಖಾತೇದಾರ, ಮಹದೇಶ ಫಡ್ತಾರೆ ಇದ್ದರು.