ಚಿಕ್ಕೋಡಿ: ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಶ್ರೀ ಸುಗಂಧಾದೇವಿಯ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಚಾಲನೆಗೊಂಡಿತ್ತು. ಜಾತ್ರಾಮಹೋತ್ಸವ ಅಂಗವಾಗಿ ಶ್ರಿ ಸುಗಂದಾದೇವಿಗೆ ವಿಶೇಷ ಪೂಜೆ,ಪುನಸ್ಕಾರ,ಆರತಿ,ನೈವ್ಯದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.ಇವತ್ತು ರಂಗ ಪಂಚಮಿಯಂದು ಶ್ರೀ ಸುಗಂಧಾ ದೇವಿಯ ಪಲ್ಲಕ್ಕಿ ಮೇರವಣಿಗೆಯ ಹಾಗೂ ಕುಂಭಮೇಳವು ಅದ್ದೂರಿಯಾಗಿ ಜರುಗಿತು.

ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ದೇವಿಯ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದರು.ಶಾಂತರೀತಿಯಿಂದ ದೇವಿಯ ದರ್ಶನ ಪಡೆದು ಪಾವನರಾದರು.ಬಳಿಕ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರಾದ ಧೂಳಗೌಡ ಪಾಟೀಲ ಹಾಗೂ ಸಿಬಿಕೆಎಸ್ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ದಾದು ಕಾಟೆಯವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಶ್ರಿ ಸುಗಂಧಾದೇವಿಯ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದೆ.
ಜಾತ್ರೆಯ ಅಂಗವಾಗಿ ಗುರವಾರ ಮಾರ್ಚ 20 ರಂದು ಮುಂಜಾನೆ 9 ಗಂಟೆಗೆ ನವತರ ಜನರಲ್ ಕುದುರೆ-ಗಾಡಿ ಶರ್ಯತ್ತು,ಶುಕ್ರವಾರ ಮಾರ್ಚ 21 ರಂದು ಮುಂಜಾನೆ 10 ಗಂಟೆಗೆ ಕುದುರೆ ಶರ್ಯತ್ತು ಹಾಗೂ ಒಂದು ಕುದುರೆ-ಒಂದು ಎತ್ತಿನ ಗಾಡಿಯ ಶರ್ಯತ್ತು ಆಯೋಜಿಸಲಾಗಿದೆ.ಶನಿವಾರ ಮಾರ್ಚ 22 ಮುಂಜಾನೆ 10 ಗಂಟೆಗೆ ರಂದು ಜೋಡ ಕುದುರೆ-ಗಾಡಿ ಶರ್ಯತ್ತು ಹಾಗೂ ರವಿವಾರ ಮಾರ್ಚ 23 ರಂದು ಮುಂಜಾನೆ 9 ಗಂಟೆಗೆ ಜೊಡತ್ತಿನ ಗಾಡಿ ಶರ್ಯತ್ತು ಆಯೋಜನೆ ಮಾಡಲಾಗಿದೆ ಎಂದರು.
ಕುಸ್ತಿ ಪಂದ್ಯಾವಳಿಗಳ ಆಯೋಜಕರಾದ ಅಣ್ಣಾಸಾಹೇಬ ಭೂವಿ ಮಾತನಾಡಿ ಶ್ರೀ ಸುಗಂಧಾ ದೇವಿಯ ಜಾತ್ರಾಮಹೋತ್ಸವ ಅಂಗವಾಗಿ ಇದೇ ಪ್ರಥಮ ಬಾರಿಗೆ ಶನಿವಾರ ಮಾರ್ಚ 22 ರಂದು ಮಧ್ಯಾಹ್ನ 2.30 ಕ್ಕೆ ಜಂಗೀ ಕುಸ್ತಿಗಳನ್ನು ಆಯೋಜನೆ ಮಾಡಲಾಗಿದೆ.ಈ ಕುಸ್ತಿ ಪಂದ್ಯಾವಳಿಗಳಲ್ಲಿ ದೇಶದ ಹೆಸರಾಂತ ಪೈಲವಾನವರು ಭಾಗವಹಿಸಲಿದ್ದಾರೆ ಎಂದರು.