ಚಿಕ್ಕೋಡಿ: ದಲಿತ ಸಂಘರ್ಷ ಸಮಿತಿ ವತಿಯಿಂದ ಮಾರ್ಚ್ 20 ರಂದು ಮಹಾಡ್ ಚವದಾರ ಕೆರೆಯ ಚಳುವಳಿಯ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆಯನ್ನು ಆಚರಿಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ ಕಾಮಶೆಟ್ಟಿ ಹೇಳಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಚವದಾರ ಕೆರೆಯ ಸತ್ಯಾಗ್ರಹದ ನೆನಪಿನಲ್ಲಿ ಮಾರ್ಚ್ 20 ರಂದು ಶೋಷಿತರ ಸಂಘರ್ಷ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಬೆಳಗಾವಿಯ ಡಾ. ಅಂಬೇಡ್ಕರ ಉದ್ಯಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಧಿಕಾರಿ ವರ್ಗದವರು ದಲಿತ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ ಎಂದರು. ಬಳಿಕ ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಬಸವರಾಜ ಢಾಕೆ ಮಾತನಾಡಿ ಈ ಕಾರ್ಯಕ್ರಮದಲ್ಲಿ ದಲಿತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೋಳಿಸುವಂತೆ ಮನವಿಯನ್ನು ಮಾಡಿಕೊಂಡರು.
ಈ ಸಂಧರ್ಭದಲ್ಲಿ ಅಪ್ಪಾಸಾಹೇಬ ಮೇಲಗೇರಿ,ಅಪ್ಪಾಸಾಹೇಬ ಕಾಂಬಳೆ,ಅಶೋಕ ಕಾಂಬಳೆ,ಕಲ್ಲಪ್ಪ ಗೌಲತ್ತಿನವರ,ಶಶಿಕಾಂತ ಫಕೀರೆ,ರೇಖಾತಾಯಿ ಕಾಂಬಳೆ,ಬಾಬುರಾವ ಘಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.