Chikkodi

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ…

Share

ಚಿಕ್ಕೋಡಿ ತಾಲೂಕಿನ ಸಿದ್ದಾಪುರವಾಡಿ ಕ್ರಾಸ್ ಬಳಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಗಿನ ಜಾವ ಚಿಕ್ಕೋಡಿ-ಕಾಗವಾಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತರು ಮತ್ತು ಗಾಯಗೊಂಡವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾಗಿದ್ದಾರೆ.

ಕಲ್ಪನಾ ಅಜಿತಕುಮಾರ ಕೋಳಿ (37), ಮಹಾದೇವ ಕಾನಪ್ಪ ಕೋಳಿ (76) ಮತ್ತು ರುಕ್ಮಿಣಿ ಮಹಾದೇವ ಕೋಳಿ (60) ಘಟನೆಯಲ್ಲಿ ಮೃತರಾಗಿದ್ದಾರೆ. ಅಜಿತಕುಮಾರ ಮಹಾದೇವ ಕೋಳಿ (45), ಆದಿತ್ಯ ಅಜಿತಕುಮಾರ ಕೋಳಿ (17) ಮತ್ತು ಅನುಜಾ ಅಜಿತಕುಮಾರ ಕೋಳಿ (13) ಘಟನೆಯಲ್ಲಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ. ಅಂಕಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:

error: Content is protected !!