ಇಂದು ದಿನಾಂಕ. 5-2-2025 ರಂದು, ಶ್ರೀ ಮೂರು ಸಾವಿರ ಮಠ ಹುಬ್ಬಳ್ಳಿ, ಶ್ರೀ ಸಿದ್ಧಾರೂಡರ ಮಠ ಹುಬ್ಬಳ್ಳಿ ಈ ಕ್ಷೇತ್ರಗಳಿಗೆ ದರ್ಶನ ಪಡೆದು ಸಹ ಭೋಜನ ಕುರಿತು ಅಗಡಿ ತೋಟಕ್ಕೆ ಪಯಣಿಸುವ ನಿಮಿತ್ಯವಾಗಿ ಈ ಒಂದು ಪ್ರವಾಸವನ್ನು ಕೈಕೊಳ್ಳಲಾಗಿದೆ .
ಈ ಒಂದು ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯವರಾದ ಶ್ರೀ ಸಿ ಬಿ ಸಂಗೊಳ್ಳಿ ಸರ್ ಇವರು ವಾಹನವನ್ನು ಪೂಜೆ ಮಾಡಿ ಎಲ್ಲರಿಗೂ ಶುಭವಾಗಲಿ ಪ್ರಯಾಣವು ಆನಂದಾಯಕವಾಗಲಿ ಅಂತ ಇಚ್ಚೆಯನ್ನು ವ್ಯಕ್ತಪಡಿಸಿದರು, ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದಂತಹ ಶ್ರೀ ವ್ಹಿ. ಜಿ. ನೀರಲಗಿಮಠ ಸರ್ ಇವರು ಹಿರಿಯ ನಾಗರಿಕರಲ್ಲಿ ಒಂಟಿತನವನ್ನು ದೂರ ಮಾಡುವ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಾನ ಮನಸ್ಕರಲ್ಲಿ ಒಂದು ದಿನದ ಪ್ರವಾಸವನ್ನು ಆಯೋಜಿಸ ಲಾಗಿದೆ ಈ ಒಂದು ಪ್ರಯಾಣದ ಆನಂದವನ್ನು ಮನಃ ಪೂರ್ವಕವಾಗಿ ಆನಂದಿಸಿ ಒಂಟಿತನದಿಂದ ದೂರ ಆಗುವಂತೆ, ಹಿರಿಯ ನಾಗರೀಕರಲ್ಲಿ, ಶಾಂತಿ ಸೌಹಾರ್ದತೆ,ಸೌಜನ್ಯ, ಮಾನಸಿಕ ನೆಮ್ಮದಿ, ಸಹ ಭೋಜನ,ಸಂಸಾರ ಜಂಜಾಟದಿಂದ ವಿಮುಕ್ತಿ, ಮಠ, ಮಂದಿರ,ತೀರ್ಥಕ್ಷೇತ್ರಗಳ. ದರ್ಶನ ಈ ಒಂದು ಸದುದ್ದೇಶದಿಂದ ಈ ಪ್ರಯಾಣವನ್ನು ಏರ್ಪಡಿಸಲಾಗಿದೆ ಅಂತಾ ಹೇಳಿದರು. ತದನಂತರ ಈ ಕೆಳಗಿನ 17 ಜನ ಹಿರಿಯ ನಾಗರಿಕರು ಒಂದು ದಿನದ ಪ್ರವಾಸಕ್ಕೆ ಚಾಲನೆಗೆ ಒಳಗಾದರು
1) ಶ್ರೀ ವ್ಹಿ . ಜಿ. ನೀರಲಗಿಮಠ 2) ಶ್ರೀ ಸೋಮಶೇಖರ ಬೋಸಲೆ 3) ಶ್ರೀಮತಿ ಸುರೇಖಾ ಬೋಸಲೆ 4) ಶ್ರೀ ಬಿ.ಆರ್ ಬಿಕ್ಕಣ್ಣವರ 5) ಶ್ರೀಮತಿ ಶಾಂತಾ ಕಬ್ಬಲಿಗೇರ 6) ಶ್ರೀ. ಸಿ.ಬಿ. ಸಂಗೊಳ್ಳಿ 7) ಶ್ರೀ ಬಿ ಜಿ ಪಟ್ಟಣಶೆಟ್ಟಿ 8)ಶ್ರೀ ಬಿ.ಜಿ ಶಿವನಾಯ್ಕರ 9) ಶ್ರೀಮತಿ ಸುಶೀಲಾ ಪ್ರಭು 10) ಶ್ರೀಮತಿ ಶಿವಕ್ಕ ಗುಗ್ಗರಿ 11) ಶ್ರೀಮತಿ ಶಶಿಕಲಾ ಪಾಟೀಲ 12) ಶ್ರೀ ಎಸ್ ಸಿ ಗಂಗಾಪುರ 13) ಶ್ರೀ ಕೃಷ್ಣ ಹಂದಿಗುಂದ 14) ಶ್ರೀಮತಿ ರುಕ್ಮಿಣಿ ಹಂದಿಗುಂದ 15) ಶ್ರೀ ಕೆಂಪಣ್ಣ ಕೊಣ್ಣೂರ 16) ಶ್ರೀಮತಿ ಹೇಮಾ ಶೆಟ್ಟಿ17) ಶ್ರೀ ಎಂ. ಎಂ. ಬಡಿಗೇರ