ಆಸ್ಟೇಲಿಯಾದಲ್ಲಿ ನಡೆಯುವ ಅಂತರಾಷ್ಟ್ರಿಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಬೆಳಗಾವಿಯ ದಿವ್ಯಾಂಗಪಟು ಸುಮಿತ್ ಮುತಗೇಕರ ಹಾಗೂ ಸಾಹಿಲ್ ಜಾಧವ ಅವರಿಗೆ ಮುರಘೇಂದ್ರಗೌಡ ಎಸ್ ಪಾಟೀಲ್ ಫೌಂಡೇಶನ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು.
ಬೆಳಗಾವಿಯ ಯುವಕರಾದ ಸುಮಿತ್ ಮುತಗೇಕರ ಹಾಗೂ ಸಾಹಿಲ್ ಜಾಧವ ದಿವ್ಯಾಂಗರ ಈಜು ಸ್ಪರ್ಧೆಯ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಆಸ್ಟೇಲಿಯಾದಲ್ಲಿ ನಡೆಯುವ ಅಂತರಾಷ್ಟ್ರಿಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಮುರಘೇಂದ್ರಗೌಡ ಎಸ್ ಪಾಟೀಲ್ ಫೌಂಡೇಶನ ವತಿಯಿಂದ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಆರ್ಥಿಕ ನೆರವನ್ನು ಮಾಡಲಾಯಿತು. ಸ್ವಿಮಿಂಗ ಕ್ಷೇತ್ರದಲ್ಲಿ ಬೆಳಗಾವಿ ಯುವಕರು ವಿಜಯ ಪತಾಕೆ ಹಾರಿಸಬೇಕೆಂಬು ಶುಭಹಾರೈಸಲಾಯಿತು