ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮನ ದೇವಸ್ಥಾನ ಅಭಿವೃದ್ಧಿ ಪಾರದರ್ಶಕವಾಗಿರಲಿದೆ. ಎಲ್ಲ ಕಾಮಗಾರಿಗಳ ವಿವರವನ್ನು ವೆಬಸೈಟನಲ್ಲಿ ಹಂಚಿಕೊಳ್ಳಲಾಗುವುದು. ಶೀಘ್ರದಲ್ಲೇ ದಾಸೋಹ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಳಗಾವಿಯಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ಚಾಲನೆಯನ್ನು ನೀಡಲು ಇಂದು ಬೆಳಗಾವಿ ನಗರಕ್ಕೆ ಆಗಮಿಸಿದ ಅವರು ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ ಮಾಧ್ಯಮಗೋಷ್ಟಿ ನಡೆಸಿದರು.
ಅಭಿವೃದ್ಧಿ ಉಂಟಾದ ಸಣ್ಣಪುಟ್ಟ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಬೆಳಗಾವಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಸವದತ್ತಿ ಎಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತದಿಂದ ಹಿಂದಿಗಿಂತಲೂ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಅಲ್ಲದೇ ಭಾರತ ಹುಣ್ಣಿಮೆಯ ವೇಳೆ ದೇವಿಯ ದರ್ಶನಕ್ಕಾಗಿ ಸ್ಕ್ರೀನಗಳನ್ನು ಹಾಕಲಾಗಿದೆ. ಸೌಲಭ್ಯಗಳನ್ನು ಒದಗಿಸಲು ದೇವಸ್ಥಾನ ಕಮೀಟಿ ಕ್ರಮಕೈಗೊಳ್ಳುತ್ತಿದೆ ಎಂದರು.
ಇನ್ನು ಎಲ್ಲಮ್ಮನಗುಡ್ಡದಲ್ಲಿ ದಾಸೋಹ ಮತ್ತು ಮೇವು ದಾಸೋಹದ ಕುರಿತು ಡಿಪಿಆರ್. ಸಿದ್ಧಪಡಿಸಲಾಗುತ್ತಿದೆ. ತಿಂಗಳೊಳಗೆ ಈ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮಾಡಲಾಗುವುದು. ಒಟ್ಟಾರೆ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮನ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ನೂರು ದಿನದಲ್ಲಿ ಕೈಗೊಳ್ಳಬೇಕಾದ ಆಲೋಚನೆಯಂತೆ ಕಾಮಗಾರಿಗಳು ಆರಂಭಗೊಂಡಿವೆ ಎಂದರು.
ಶ್ರೀ ಕ್ಷೇತ್ರದ ಅಭಿವೃದ್ಧಿಯ ಕುರಿತು ವಿಶೇಷ ಚರ್ಚೆಯನ್ನು ನಡೆಸಲಾಗಿದೆ. ವಸತಿ ವ್ಯವಸ್ಥೆ, ವಿಶ್ರಾಂತಿ ಗೃಹ, ಅಡುಗೆ ಮನೆ, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲದರ ವಿವರವನ್ನು ನೀಡಲಾಗುವುದು. ಕೇಂದ್ರ ಸರ್ಕಾರದದಿಂದಲೂ 100 ಕೋಟಿ ರೂಪಾಯಿ ಮಂಜೂರಾಗಿದೆ. ಅಲ್ಲದೇ ತಮ್ಮ ಪ್ರಯತ್ನದಿಂದಲೂ 20 ಕೋಟಿ ರೂಪಾಯಿ ಪ್ರಸಾದ ಯೋಜನೆಗಾಗಿ ಮಂಜೂರಾಗಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗಾಗಿ ಇನ್ನಷ್ಟು ಅನುದಾನದ ಅವಶ್ಯತೆಯಿದೆ. ಹಲವಾರು ಯೋಜನೆಗಳನ್ನು ಪಿಪಿಪಿ ಮಾಡೆಲನಲ್ಲಿ ಕೈಗೊಳ್ಳಲಾಗುವುದು. ತೆರವು ಕಾರ್ಯಾಚರಣೆಯನ್ನು ಕೂಡ ನಡೆಸಲಾಗುವುದು. ಎಲ್ಲ ಕಾಮಗಾರಿಯ ಮಾಹಿತಿಯನ್ನು ವೆಬಸೈಟ್ ಮೇಲೆ ಪ್ರದರ್ಶಿಸಲಾಗುವುದು. ಜನರಿಂದ ಸಲಹೆಗಳು ಬಂದರೇ ಸ್ವೀಕರಿಸಲಾಗುವುದು ಎಂದರು.
ಅಲ್ಲದೇ ಐತಿಹಾಸಿಕ ಗೋಕಾಕ್ ಫಾಲ್ಸ್ ಅಭಿವೃದ್ಧಿಗಾಗಿ ರೋಪ ವೇ ನಿರ್ಮಿಸಲು ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಇನ್ನುಳಿದವರು ಗಂಭೀರವಾಗಿ ಸಭೆಯನ್ನು ನಡೆಸಲಾಗಿದೆ. ತಜ್ಞರೊಂದಿಗೆ ಚರ್ಚಿಸಿ ಪ್ರಾಜೆಕ್ಟ್ ತಯಾರಿಸಲು ಸೂಚನೆಯನ್ನು ನೀಡಲಾಗಿದೆ ಎಂದರು.
ಇನ್ನು ಭೀಮಗಢ ಅಭಯಾರಣ್ಯದಲ್ಲಿ ಸುಮಾರು 18 ಕಿಲೋ ಮೀಟರ್ ರಸ್ತೆಯನ್ನು ಜಂಗಲ್ ಸಫಾರಿಗಾಗಿ ನೀಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತಿದೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನಮಗೆ ನಿರ್ದೇಶನ ನೀಡಿದ್ದು, ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. ಅಲ್ಲದೇ ಇದು ತಮಗೆ ಸಂಬಂಧಿಸಿದಲ್ಲ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಗೀತಾ ಕೌಲಗಿ, ಸೌಮ್ಯಾ ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.