Belagavi

ಭಕ್ತಿಯ ಪರಾಕಾಷ್ಠೆ ಮೆರೆದ ಮಾಜಿ ಸೈನಿಕ ಮುತ್ತೆನ್ನವರ ದಂಪತಿಯಿಂದ ಗ್ರಾಮದೇವತೆ ಮೂರ್ತಿಗೆ 7 ಕೆ.ಜಿ. ಬೆಳ್ಳಿ ಕವಚದ ಕೊಡುಗೆ…

Share

ಬೈಲಹೊಂಗಲ ತಾಲೂಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ಮೂರ್ತಿಗೆ 7 ಕೆಜಿ ಬೆಳ್ಳಿ ಕವಚವನ್ನು ಮಾಜಿ ಸೈನಿಕ ಮಲ್ಲಿಕಾರ್ಜುನ ಮುತ್ತೆನ್ನವರ ಮತ್ತು ಶಕುಂತಲಾ ಮುತ್ತೆನ್ನವರ ದಂಪತಿಗಳು ನೀಡಿದ್ದಾರೆ.

ಬೈಲಹೊಂಗಲ ತಾಲೂಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ಮೂರ್ತಿಗೆ 7 ಕೆಜಿ ಬೆಳ್ಳಿ ಕವಚವನ್ನು ಮಾಜಿ ಸೈನಿಕ ಮಲ್ಲಿಕಾರ್ಜುನ ಮುತ್ತೆನ್ನವರ ಮತ್ತು ಶಕುಂತಲಾ ಮುತ್ತೆನ್ನವರ ದಂಪತಿಗಳು ನೀಡಿದ್ದು,ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಸ್ತಮರಡಿ ಗ್ರಾಮದಲ್ಲಿ ತಮ್ಮದೇ ಆದಂತಹ ಸಮಾಜ ಸೇವೆ ಹಾಗೂ ಜನರ

ಸಮಸ್ಯೆಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಾ ಗ್ರಾಮದ ಜನರ ಪ್ರೀತಿಯನ್ನು ಗಳಿಸಿರುವ ಮುತ್ತೆನ್ನವರ ಕುಟುಂಬ ಈಗ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ಮೇಲಿರುವ ಭಕ್ತಿಗೆ 7 ಕೆಜಿ ಯ ಬೆಳ್ಳಿಯ ಕವಚ ನೀಡಿದ್ದಾರೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಮಹಿಳೆಯರು ಕುಂಭಮೇಳದೊಂದಿಗೆ ಪಾಲ್ಗೊಂಡರು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಗುರುಹಿರಿಯರು ಮುಖಂಡರು ಯುವಕರು ಮಹಿಳೆಯರು ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Tags:

error: Content is protected !!