ರಾಜ್ಯದಲ್ಲಿರುವ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸಿ, ಜೈಲಿನಲ್ಲಿ ಸಿಬ್ಬಂದಿಗಳ ಹುದ್ಧೆಗಳನ್ನು ಭರ್ತಿ ಮಾಡುವ ವಿಚಾರವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಸೇಂಟ್ರಲ್ ಜೈಲನ್ನು ವಿಭಾಗ ಮಾಡುವ ಪ್ರಸ್ತಾವಗಳಿಲ್ಲ. ಆದರೇ ರಾಜ್ಯದಲ್ಲಿನ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸುವ ವಿಚಾರವಿದೆ. ಜೈಲಿನ ಸಿಬ್ಬಂದಿಗಳ ಹುದ್ದೆಯನ್ನು ಕಳೆದ ಹಲವಾರು ವರ್ಷಗಳಿಂದ ಆಗಿಲ್ಲ. ಅವುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದರು. ಬೈಟ್
ಇನ್ನು ಮೈಕ್ರೋ ಫೈನಾನ್ಸನ ಬಡ್ಡಿದರ ಕಡಿವಾಣ ತಮ್ಮ ಪರಿಮಿತಿಗೆ ಬರಲ್ಲ. ಗ್ರಾಹಕರು ಫೈನಾನ್ಸನವರಿಂದ ಮೋಸಕ್ಕೆ ಒಳಗಾದಾಗ ಮಾತ್ರ ಕ್ರಮಕೈಗೊಳ್ಳುವ ಅಧಿಕಾರ ಗೃಹ ಇಲಾಖೆಗಿದೆ ಎಂದರು.